ADVERTISEMENT

ಸುಬ್ರಹ್ಮಣ್ಯ: ಬಿಬಿಎ ವಿದ್ಯಾರ್ಥಿನಿ ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 13:13 IST
Last Updated 22 ಜನವರಿ 2025, 13:13 IST
ಸ್ವಾತಿ ರೈ ಆರ್ತಿಲ
ಸ್ವಾತಿ ರೈ ಆರ್ತಿಲ   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಇಲ್ಲಿನ ಕೆಎಸ್ಎಸ್ ಕಾಲೇಜಿನಲ್ಲಿ ಅಂತಿಮ ಬಿಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸ್ವಾತಿ ರೈ ಆರ್ತಿಲ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ (ಪಿಎಲ್‌ಡಿ) ನಿರ್ದೇಶಕಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರು ಕಡಬ ತಾಲ್ಲೂಕಿನ ಆರ್ತಿಲದ ದಿ.ಆನಂದ ರೈ ಮತ್ತು ತಾರಾ ರೈ ಅವರ ಪುತ್ರಿ. 

ಸಹಕಾರ ಭಾರತಿ ಸಂಘಟನೆಯವರು ತಮ್ಮ ಗುಂಪಿನಿಂದ ಸ್ಪರ್ಧಿಸುವಂತೆ ಸ್ವಾತಿ ರೈ ಅವರ ತಾಯಿ ತಾರಾ ರೈ ಅವರಿಗೆ ತಿಳಿಸಿದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳಿಂದ ಅದನ್ನು ತಿರಸ್ಕರಿಸಿದ್ದರು. ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್. ಮತ್ತಿತರರು ವಿದ್ಯಾರ್ಥಿನಿಗೆ ಧೈರ್ಯ ತುಂಬಿದರು. ಆರಂಭದಲ್ಲಿ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ, ನಂತರ ಬಂದ ಅವಕಾಶವನ್ನು ಬಳಸಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿ ನಾಮಪತ್ರ ಸಲ್ಲಿಸಿದ್ದರು. ಅವಿರೋಧವಾಗಿ ಅವರು ಆಯ್ಕೆಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.