ADVERTISEMENT

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 14:04 IST
Last Updated 26 ನವೆಂಬರ್ 2025, 14:04 IST
   

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ‘ಬ್ಯಾರಿ ಅಕಾಡೆಮಿ ಚಮ್ಮನʼ (ಗೌರವ ಪುರಸ್ಕಾರ)ಕ್ಕೆ ಹತ್ತು ಮಂದಿ ಸಾಧಕರನ್ನು ಆಯ್ಕೆ ಮಾಡಿದೆ.

ಅಬ್ದುಲ್‌ ಸಮದ್‌ ಬಾವಾ, ನಝ್ಮತ್ತುನ್ನೀಸಾ ಲೈಝ್‌, ಯಂ.ಪಿ ಬಶೀರ್‌ ಅಹ್ಮದ್‌ (ಬ್ಯಾರಿ ಸಾಹಿತ್ಯ), ಅನ್ಸಾರ್‌ ಇನೋಳಿ ಮತ್ತು ಸೈಫ್‌ ಕುತ್ತಾರ್‌ (ಬ್ಯಾರಿ ಭಾಷೆ), ರಶೀದ್‌ ನಂದಾವರ ಮತ್ತು ಮಹಮ್ಮದ್‌ ಅಲಿ ಬಡ್ಡೂರು, ಮಲ್ಲಿಕಾ ಶೆಟ್ಟಿ (ಬ್ಯಾರಿ ಸಂಸ್ಕೃತಿ, ಕಲೆ), ಟಿ.ಎಂ ಶಹೀದ್‌ (ಬ್ಯಾರಿ ಭಾಷೆ, ಸಂಘಟನೆ), ಯಾಸೀರ್‌ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ) ಅವರು ‘ಬ್ಯಾರಿ ಅಕಾಡೆಮಿ ಚಮ್ಮನʼ ಕ್ಕೆ ಆಯ್ಕೆಯಾಗಿದ್ದಾರೆ.

ಈ ಪುರಸ್ಕಾರವು ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಬ್ಯಾರಿ ಅಕಾಡೆಮಿ ಚಮ್ಮನ ಸಮಾರಂಭವು ಡಿ.7ರಂದು ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಎಚ್. ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.