ADVERTISEMENT

ತುಳು, ಬ್ಯಾರಿ ಭಾಷೆ ಒಂದೇ ನಾಣ್ಯದ ಎರಡು ಮುಖಗಳು

ಬ್ಯಾರಿ ಭಾಷಾ ದಿನಾಚರಣೆಯಲ್ಲಿ ಅಬ್ದುಲ್ ರಜಾಕ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 15:48 IST
Last Updated 3 ಅಕ್ಟೋಬರ್ 2022, 15:48 IST
‘ಬ್ಯಾರಿ ವಚನ ಮಾಲೆ’ ಕೃತಿಯನ್ನು ಕಾರ್ಯಕ್ರಮದಲ್ಲಿ ಹಂಝ ಮಲಾರ್‌ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು.  ಅಬ್ದುಲ್ ರಜಾಕ್‌ ಅನಂತಾಡಿ, ಪೂರ್ಣಿಮಾ, ಡಾ.ಅನಸೂಯ ರೈ, ಕೃತಿಯ ಲೇಖಕ ಅಶಿರುದ್ದೀನ್ ಆಲಿಯಾ ಹಾಗೂ ಡಾ.ಅಬೂಬಕ್ಕರ್‌ ಸಿದ್ದಿಕ್‌ ಇದ್ದಾರೆ– ಪ್ರಜಾವಾಣಿ ಚಿತ್ರ
‘ಬ್ಯಾರಿ ವಚನ ಮಾಲೆ’ ಕೃತಿಯನ್ನು ಕಾರ್ಯಕ್ರಮದಲ್ಲಿ ಹಂಝ ಮಲಾರ್‌ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು.  ಅಬ್ದುಲ್ ರಜಾಕ್‌ ಅನಂತಾಡಿ, ಪೂರ್ಣಿಮಾ, ಡಾ.ಅನಸೂಯ ರೈ, ಕೃತಿಯ ಲೇಖಕ ಅಶಿರುದ್ದೀನ್ ಆಲಿಯಾ ಹಾಗೂ ಡಾ.ಅಬೂಬಕ್ಕರ್‌ ಸಿದ್ದಿಕ್‌ ಇದ್ದಾರೆ– ಪ್ರಜಾವಾಣಿ ಚಿತ್ರ   

ಮಂಗಳೂರು: ‘ತುಳು ಮತ್ತು ಬ್ಯಾರಿ ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಭಾಷೆಗಳ ನಡುವೆ ಸಾಮರಸ್ಯ ಇದೆ. ಈ ಭಾಷೆಗಳನ್ನು ಮಾತನಾಡುವವರು ನೂರಾರು ವರ್ಷಗಳಿಂದಲೂ ಸಹಬಾಳ್ವೆ ನಡೆಸುತ್ತಿದ್ದಾರೆ’ ಎಂದು ಬಂಟ್ವಾಳ ತಾಲ್ಲೂಕಿನ ಬಿ.ಮೂಡಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು ವಿಶ್ವವಿದ್ಯಾನಿಲಯದಬ್ಯಾರಿ ಅಧ್ಯಯನ ಪೀಠದ ಸಹಯೋಗದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಬ್ಯಾರಿ ಭಾಷಾ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ಬ್ಯಾರಿ ಭಾಷೆಗೆ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪ್ರಾಮುಖ್ಯತೆ ಇದೆ’ ಎಂದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ, ‘ವಿವಿಧ ಭಾಷೆಗಳನ್ನು ಒಳಗೊಂಡ ಸಾಮರಸ್ಯದ ನಾಡು ನಮ್ಮದು. ಬ್ಯಾರಿ, ತುಳು, ಕೊಂಕಣಿ ಭಾಷೆಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಇಂತಹ ಭಾಷೆಗಳಿರುವ ಈ ಪ್ರದೇಶದಲ್ಲಿ ಸಹಬಾಳ್ವೆ, ಸೋದರತೆ ಕಾಯ್ದುಕೊಳ್ಳುವುದೂ ಮುಖ್ಯ’ ಎಂದರು.

ಬಜಾಲ್‌ನ ಸ್ನೇಹ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ಅಶೀರುದ್ದೀನ್ ಆಲಿಯಾ ರಚಿಸಿರುವ ‘ಬ್ಯಾರಿ ವಚನಮಾಲೆ’ ಕೃತಿಯನ್ನು ಪತ್ರಕರ್ತ ಹಂಝ ಮಲಾರ್‌ ಬಿಡುಗಡೆ ಮಾಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಅಕಾಡೆಮಿ ಸದಸ್ಯೆ ಸುರೇಖಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.