ADVERTISEMENT

ಆಸ್ಪತ್ರೆಗೆ ಹಾಸಿಗೆ ಬಟ್ಟೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:11 IST
Last Updated 10 ಜುಲೈ 2021, 4:11 IST
 ಸ್ಟ್ಯಾನ್ ಸ್ವಾಮಿಗೆ ನ್ಯಾಯ ನೀಡುವಂತೆ ಇಲ್ಲಿನ ಸಮಾನ ಮನಸ್ಕರು ಶುಕ್ರವಾರ ಮೂಡುಬಿದಿರೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
 ಸ್ಟ್ಯಾನ್ ಸ್ವಾಮಿಗೆ ನ್ಯಾಯ ನೀಡುವಂತೆ ಇಲ್ಲಿನ ಸಮಾನ ಮನಸ್ಕರು ಶುಕ್ರವಾರ ಮೂಡುಬಿದಿರೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.   

ಬಂಟ್ವಾಳ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರು ಇಲ್ಲಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 75 ಹಾಸಿಗೆ ಬಟ್ಟೆ ರವಾನಿಸಿದ್ದಾರೆ.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮತ್ತು ಯೋಜನಾಧಿಕಾರಿ ಜಯಾನಂದ ಪಿ., ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ ಉಮೇಶ್ ಅಡ್ಯಂತಾಯ ಅವರಿಗೆ ಹಾಸಿಗೆ ಬಟ್ಟೆ ಹಸ್ತಾಂತರಿಸಿದರು.

ವೈದ್ಯರಾದ ಡಾ. ಅಕ್ಷತಾ ನಾಯಕ್, ಡಾ.ವಸುಧಾ, ಕಚೇರಿ ಮೇಲ್ವಿಚಾರಕ ಐವನ್ ಕುಟ್ಟಿನ್, ಪ್ರಮುಖರಾದ ಅಬ್ದುಲ್ ರಶೀದ್, ಸೌಮ್ಯಾ ಮಾಧವ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಸಿ. ಶ್ರೀಧರ್ ಪೈ, ಸದಸ್ಯರಾದ ನವೀನಚಂದ್ರ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಂಜನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.