ಮಂಗಳೂರು: ಇಲ್ಲಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರೆಮೋನಾ ಇವೆಟ್ಟ ಪಿರೇರಾ ಸತತ 170 ಗಂಟೆ ಭರತ ನಾಟ್ಯ ಪ್ರದರ್ಶನ ನೀಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಈಗಾಗಲೇ ಭರತ ನಾಟ್ಯ ಆರಂಭಿಸಿರುವ ಅವರು ಹಗಲು ರಾತ್ರಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಗಂಟೆಗಳಿಗೊಮ್ಮೆ 15 ನಿಮಿಷ ವಿಶ್ರಾಂತಿ ಪಡೆದು ನೃತ್ಯ ಮುಂದುವರಿಸುತ್ತಿದ್ದಾರೆ. ಇದೇ 28ರಂದು ನೃತ್ಯ ಪ್ರದರ್ಶನವನ್ನು ಪೂರ್ಣಗೊಳಿಸುವ ಇರಾದೆಯನ್ನು ಹೊಂದಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನಪಡೆಯುವುದು ರೆಮೋನಾ ಉದ್ದೇಶ.
ಮೂರು ವರ್ಷದ ಬಾಲಕಿಯಾಗಿದ್ದಾಗಲೇ ಭರತ ನಾಟ್ಯ ಕಲಿಕೆ ಆರಂಭಿಸಿದ್ದ ರೆಮೋನಾ ಶ್ರೀವಿದ್ಯಾ ಮುರಳೀಧರ್ ಅವರ ಬಳಿ ನಾಟ್ಯಾಭ್ಯಾಸ ಮಾಡಿದ್ದಾರೆ. 2019ರಲ್ಲಿ ರಂಗಪ್ರವೇಶ ಮಾಡಿರುವ ಅವರು ಕೇಂದ್ರ ಸರ್ಕಾರ ನೀಡುವ ಪ್ರಧಾನಮಂತ್ರಿ ಬಾಲಪುರಸ್ಕಾರ ಹಾಗೂ ರಾಜ್ಯ ಸರ್ಕಾರ ನೀಡುವ ಬಾಲಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.