ADVERTISEMENT

ಮಂಗಳೂರು: ರಕ್ತದಾನ ಜಾಗೃತಿಗಾಗಿ ಬೈಕ್‌ಯಾನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 14:21 IST
Last Updated 27 ಜುಲೈ 2023, 14:21 IST
ಪತ್ರಿಕಾಗೋಷ್ಠಿಯಲ್ಲಿ ಸೈಫ್‌ ಸುಲ್ತಾನ್ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಸೈಫ್‌ ಸುಲ್ತಾನ್ ಮಾತನಾಡಿದರು   

ಮಂಗಳೂರು: ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಂಗಳೂರಿನಿಂದ ಕಾರ್ಗಿಲ್‌ಗೆ ಇಲ್ಲಿಯ ಸೈಫ್‌ ಸುಲ್ತಾನ್ ಮತ್ತು ಅವರ ಪತ್ನಿ ಅದೀಲಾ ಫರೀನ್‌ ಬೈಕ್‌ ಯಾನ ಕೈಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಕ್ತದಾನ ಮಹತ್ವ ತಿಳಿಸಲು ಬೈಕ್‌ ಯಾನದ ಮೂಲಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಜುಲೈ 28ರಂದು ಮಲ್ಲಿಕಟ್ಟೆಯ ಲಯನ್ಸ್‌ ಕ್ಲಬ್‌ನಲ್ಲಿ ಬೆಳಿಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ತ್ರಿವರ್ಣಧ್ವಜ ಹಸ್ತಾಂತರಿಸಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹಾಗೂ ತುಳುನಾಡು ಧ್ವಜವನ್ನೂ ಒಯ್ಯಲಿದ್ದೇವೆ. ಆಗಸ್ಟ್‌ 15ರಂದು ಕಾರ್ಗಿಲ್‌ ತಲುಪಲಿದ್ದು, ಅಲ್ಲಿ ಕರ್ನಲ್‌ ಅಭಿಮನ್ಯು ಅವರಿಗೆ ಧ್ವಜ ಹಸ್ತಾಂತರ ಮಾಡಲಿದ್ದೇವೆ’ ಎಂದು ತಿಳಿಸಿದರು.

‘ಒಟ್ಟು 3,600 ಕಿ.ಮೀ ಪ್ರಯಾಣವಿದ್ದು, ಪೂರ್ತಿಗೊಳಿಸಲು 18 ದಿನಗಳು ಬೇಕಾಗುತ್ತವೆ. ದಿನಕ್ಕೆ 300 ಕಿ.ಮೀ ಕ್ರಮಿಸಲಿದ್ದು, 9 ರಾಜ್ಯಗಳಿಗೆ ಭೇಟಿ ನೀಡಲಿದ್ದೇವೆ. ಬಿಎಂಡಬ್ಲ್ಯೂ ಜಿಎಸ್‌310 ಬೈಕ್‌ ಜೊತೆಯಾಗಲಿದೆ. ಒಟ್ಟು ₹2.8 ಲಕ್ಷ ಖರ್ಚಾಗಲಿದ್ದು, ಎಕೆ ಪ್ಲೈವುಡ್‌  ಹಾಗೂ ಸುಲ್ತಾನ್‌ ಗೋಲ್ಡ್‌ ಸಂಸ್ಥೆಗಳು ಪ್ರಾಯೋಜಕತ್ವ ಒದಗಿಸಲು ಮುಂದೆಬಂದಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ದೇಶದಲ್ಲಿ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಜನಸಂಖ್ಯೆಯ ಶೇ 1 ಭಾಗ ಮಾತ್ರ ರಕ್ತದಾನ ಮಾಡುತ್ತಾರೆ. ಆದ್ದರಿಂದ ಈ ಯಾನದ ಮೂಲಕ ಜನರಲ್ಲಿ ರಕ್ತದಾನ ಮಹತ್ವದ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಅವರು ತಿಳಿಸಿದರು.

ಅವರ ಪತ್ನಿ ಅದೀಲಾ ಫರೀನ್‌ ಮತ್ತು ಬೈಕ್‌ ಮೆಕ್ಯಾನಿಕ್‌ ಜವಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.