ADVERTISEMENT

ಪುತ್ತೂರು: ಬಿಜೆಪಿಯಿಂದ ತಿರಂಗಾ ಯಾತ್ರೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ, ಹೋರಾಟಗಾರರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:14 IST
Last Updated 15 ಆಗಸ್ಟ್ 2022, 4:14 IST
ಬಿಜೆಪಿ ವತಿಯಿಂದ ಭಾನುವಾರ ಪುತ್ತೂರಿನಲ್ಲಿ ನಡೆದ ಪಾದಯಾತ್ರೆಗೆ ಬೊಳುವಾರಿನಲ್ಲಿ ಬಿಜೆಪಿ ಮುಖಂಡ ಮುಗೆರೋಡಿ ಬಾಲಕೃಷ್ಣ ರೈ ಮತ್ತು ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಶಾಸಕ ಸಂಜೀವ ಮಠಂದೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಬಿಜೆಪಿ ವತಿಯಿಂದ ಭಾನುವಾರ ಪುತ್ತೂರಿನಲ್ಲಿ ನಡೆದ ಪಾದಯಾತ್ರೆಗೆ ಬೊಳುವಾರಿನಲ್ಲಿ ಬಿಜೆಪಿ ಮುಖಂಡ ಮುಗೆರೋಡಿ ಬಾಲಕೃಷ್ಣ ರೈ ಮತ್ತು ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಶಾಸಕ ಸಂಜೀವ ಮಠಂದೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.   

ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಭಾನುವಾರ ಪುತ್ತೂರು ನಗರದಲ್ಲಿ ಪಾದಯಾತ್ರೆ ನಡೆಯಿತು.

ನಗರದ ಬೊಳುವಾರಿನಿಂದ ರಾಷ್ಟ್ರಧ್ವಜ ಹಿಡಿದುಕೊಂಡು ಆರಂಭಗೊಂಡ ಪಾದಯಾತ್ರೆಯು ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು.

ಬೊಳುವಾರಿನಲ್ಲಿ ಬಿಜೆಪಿ ಮುಖಂಡರಾದ ಮುಗೆರೋಡಿ ಬಾಲಕೃಷ್ಣ ರೈ ಮತ್ತು ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಶಾಸಕ ಸಂಜೀವ ಮಠಂದೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಗಾಂಧೀಕಟ್ಟೆಯಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕದ ಬಳಿಗೆ ಬಂದು, ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖಂಡರಾದ ವಕೀಲ ಪ್ರಸಾದ್, ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಕೆ.ಜೀವಂಧರ್ ಜೈನ್, ವಿದ್ಯಾ ಗೌರಿ, ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ರಾಜೇಶ್ ಬನ್ನೂರು, ಮೀನಾಕ್ಷಿ ಶಾಂತಿಗೋಡು, ನನ್ಯ ಅಚ್ಚುತ ಮೂಡೆತ್ತಾಯ, ಕೃಷ್ಣಪ್ರಸನ್ನ, ಆರ್.ಸಿ.ನಾರಾಯಣ, ನಿತೀಶ್‌ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸುರೇಶ್ ಆಳ್ವ ಸಾಂತ್ಯ, ಜಯಶ್ರೀ ಶೆಟ್ಟಿ, ಗೌರಿ ಬನ್ನೂರು, ರಾಮದಾಸ್ ಹಾರಾಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.