ADVERTISEMENT

ಉಳ್ಳಾಲ: ಸೌಹಾರ್ದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 13:59 IST
Last Updated 29 ಜೂನ್ 2025, 13:59 IST
ತೊಕ್ಕೊಟ್ಟುವಿನ ಮಸ್ಜಿದುಲ್ ಹುದಾ ಮಸೀದಿಯಲ್ಲಿ ನಡೆದ ಸೌಹಾರ್ದ ರಕ್ತದಾನ ಶಿಬಿರದಲ್ಲಿ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿದರು
ತೊಕ್ಕೊಟ್ಟುವಿನ ಮಸ್ಜಿದುಲ್ ಹುದಾ ಮಸೀದಿಯಲ್ಲಿ ನಡೆದ ಸೌಹಾರ್ದ ರಕ್ತದಾನ ಶಿಬಿರದಲ್ಲಿ ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿದರು   

ಉಳ್ಳಾಲ: ಸದ್ಭಾವನಾ ವೇದಿಕೆ ಉಳ್ಳಾಲ, ಪೊಸಕುರಲ್ ತೊಕ್ಕೊಟ್ಟು, ಸೋಷಿಯಲ್ ಸರ್ವಿಸ್ ಸೆಂಟರ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಆಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಮಸ್ಜಿದುಲ್ ಹುದಾ ತೊಕ್ಕೊಟ್ಟುವಿನಲ್ಲಿ ನಡೆಯಿತು.

ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಶಿಬಿರ ಉದ್ಘಾಟಿಸಿದರು.

ಪೊಸಕರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿದರು.

ADVERTISEMENT

ಮಸ್ಜಿದುಲ್ ಹುದಾ ತೊಕ್ಕೊಟ್ಟು ಖತೀಬ್ ಮೊಹಮ್ಮದ್ ಕುಂಞಿ ಸಮಾರೋಪ ಭಾಷಣ

ಮಸ್ಜುದುಲ್ ಹುದಾ ತೊಕ್ಕೊಟ್ಟು ಅಧ್ಯಕ್ಷ ಅಧ್ಯಕ್ಷ ಎ.ಎಚ್.ಮೆಹಮೂದ್, ಅಬ್ದುಲ್ ಮಜೀದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಅಧ್ಯಕ್ಷ ನಝೀರ್ ಹುಸೈನ್, ಸದಸ್ಯ ಅಬ್ದುಲ್ ಹಮೀದ್ ಗೊಳ್ತಮಜಲ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಉಳ್ಳಾಲ ಘಟಕದ ಅಧ್ಯಕ್ಷ ಜೆಬಿ ಹುಸೈನ್ ಭಾಗವಹಿಸಿದ್ದರು.

ಸೋಷಿಯಲ್ ಸರ್ವಿಸ್ ವಿಭಾಗದ ಅಧ್ಯಕ್ಷ ಇಸಾಕ್ ಹಸನ್ ಸ್ವಾಗತಿಸಿದರು. ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ ಅಧ್ಯಕ್ಷ ಯೂಸುಫ್ ಅಸ್ಲಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು. ನಿಝಾಮ್ ತೊಕ್ಕೊಟ್ಟು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.