ADVERTISEMENT

ದೋಣಿ ದುರಂತ: ಪತ್ತೆಯಾಗದ ಮೀನುಗಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 3:54 IST
Last Updated 11 ಆಗಸ್ಟ್ 2021, 3:54 IST
ಚಿತ್ರ:10ಯುಎಲ್2: ಕಣ್ಣತಾಸನ್
ಚಿತ್ರ:10ಯುಎಲ್2: ಕಣ್ಣತಾಸನ್   

ಉಳ್ಳಾಲ: ದೋಣಿ ದುರಂತಕ್ಕೀಡಾಗಿ ಐದು ದಿನಗಳು ಕಳೆದರೂ ನಾಪತ್ತೆಯಾದ ಮೀನುಗಾರ ಕಣ್ಣತಾಸನ್ (62) ಎಂಬುವರು ಇನ್ನೂ ಪತ್ತೆಯಾಗಿಲ್ಲ.

ಆಗಸ್ಟ್ 5ರಂದು ಹಳೇ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಧ್ಯಾ-2 ಮೀನುಗಾರಿಕಾ ದೋಣಿ, ಹಿಂದೆ ಮುಳುಗಿದ್ದ ಹಡಗಿನ ಅವಶೇಷಗಳಿಗೆ ಡಿಕ್ಕಿ ಹೊಡೆದು ಮುಳುಗಿತ್ತು. ಈ ವೇಳೆ ಚಾಲಕ ಸೌಂದಿರರಾಜನ್ ಮತ್ತು 9 ಮಂದಿಯನ್ನು ಇತರ ಬೋಟ್‌ನವರು ರಕ್ಷಿಸಿದ್ದರು. ಆದರೆ, ಮೀನುಗಾರ ಕಣ್ಣತಾಸನ್ ನಾಪತ್ತೆಯಾಗಿದ್ದರು. ಈ ಬಗ್ಗೆ ದೋಣಿ ಮಾಲೀಕ ಭಾನುಪ್ರಕಾಶ್, ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT