ADVERTISEMENT

ಫೆ.29ರಿಂದ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 12:52 IST
Last Updated 27 ಫೆಬ್ರುವರಿ 2024, 12:52 IST
ಕಿನ್ನಿಗೋಳಿ ಬಳಿಯ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನ
ಕಿನ್ನಿಗೋಳಿ ಬಳಿಯ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನ   

ಮೂಲ್ಕಿ: ಇಲ್ಲಿನ ಕಿನ್ನಿಗೋಳಿ ಬಳಿಯ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ಸುಮಾರು ₹ 6 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದು, ಫೆ.29ರಿಂದ ಮಾರ್ಚ್‌ 13ರ ವರೆಗೆ ನೂತನ ಭಂಡಾರ ಚಾವಡಿಯಲ್ಲಿ ಅರಸುಕುಂಜರಾಯರ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ದೈವಗಳ ನೇಮ ನಡೆಯಲಿದೆ.

ದೈವಸ್ಥಾನದ ಮೂಡುಪಡು, ತೆಂಕು ಬಡಗು ಗೋಪುರಗಳ ನಿರ್ಮಾಣ, ನೂತನ ಧ್ವಜ ಮರ ಪ್ರತಿಷ್ಠೆ, ಆವರಣ ಗೋಡೆ ದೈವಗಳ ಕೊಡಿ ಅಡಿ, ಸಾರ್ವಜನಿಕ ಸಭಾಭವನ, ಅರಸು ಕುಂಜರಾಯ ಪರಿವಾರ ದೈವಗಳ ನೂತನ ಭಂಡಾರ ಚಾವಡಿ, ಕಾಂತಾರಜಾಲಿನಲ್ಲಿ ಸಿಂಹಾಸನ ಕಟ್ಟೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ದಿನಂಪ್ರತಿ ನೂರಾರು ಗ್ರಾಮಸ್ಥರು ಕರಸೇವೆಯೊಂದಿಗೆ ಅಲಂಕಾರ, ಸ್ವಚ್ಛತೆ, ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ‍್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT