ಸಾಂದರ್ಭಿಕ ಚಿತ್ರ
ಮಂಗಳೂರು: ಡಿಜಿಟಲ್ ಕೇಬಲ್ ಸಿಗ್ನಲ್ ಸೇವೆ ನೀಡುವ ಕಂಪನಿಗೆ ಸರ್ವರ್ ಒದಗಿಸುವ ಸಲುವಾಗಿ ₹4.20 ಲಕ್ಷ ಮುಂಗಡ ಪಡೆದು ವಂಚಿಸಿದ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಸರ್ವರ್ ಸಂಪರ್ಕ ಒದಗಿಸುವ ಸಲುವಾಗಿ ಹೈದರಾಬಾದ್‌ನ ಸ್ವೇಚ್ಛಾ ಐಟಿ ವರ್ಲ್ಡ್ ಸಂಸ್ಥೆಗೆ 2023ರ ಅ.23ರಂದು ₹ 2ಲಕ್ಷ ಹಾಗೂ ಅ.6ರಂದು ₹ 2.20 ಲಕ್ಷವನ್ನು ಆರ್‌ಟಿಜಿಎಸ್ ಮೂಲಕ ಪಾವತಿಸಿದ್ದೆವು. ಹಣವನ್ನು ಪಡೆದ ಬಳಿಕ ಈ ಕಂಪನಿಯ ನವೀನ್ ಪಿ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕಂಪನಿಯು ಸರ್ವರ್ ಸೇವೆಯನ್ನೂ ನೀಡದೇ, ಹಣವನ್ನೂ ಹಿಂತಿರುಗಿಸದೇ ವಂಚಿಸಿದೆ ಎಂಬುದಾಗಿ ವಿ4 ಡಿಜಿಟಲ್ ಇನ್‌ಫೋಟೆಕ್ ಕಂಪನಿಯು ದೂರಿನಲ್ಲಿ ತಿಳಿಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.