ADVERTISEMENT

ಗುಂಡೂರಿ: ಕರುಗಳ ಪ್ರದರ್ಶನ, ವಿಚಾರಗೋಷ್ಠಿ

ಹೈನುಗಾರಿಕಾ ಪರಿಕರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 7:58 IST
Last Updated 16 ಡಿಸೆಂಬರ್ 2023, 7:58 IST
ಗುಂಡೂರಿಯ ಶ್ರೀಸತ್ಯನಾರಾಯಣ ಭಜನಾ ಮಂದಿರದ ವಠಾರದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ನಡೆಯಿತು
ಗುಂಡೂರಿಯ ಶ್ರೀಸತ್ಯನಾರಾಯಣ ಭಜನಾ ಮಂದಿರದ ವಠಾರದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ನಡೆಯಿತು   

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ನೇತೃತ್ವದಲ್ಲಿ ಕುಕ್ಕೇಡಿ, ಪಡಂಗಡಿ, ಪೆರಿಂಜೆ, ಅಂಡಿಂಜೆ, ಕರಿಮಣೇಲು, ಮೂಡುಕೋಡಿ, ಹೊಸಪಟ್ಣ, ಗಾಂಧಿನಗರ, ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಹೈನುಗಾರಿಕಾ ಪರಿಕರಗಳ ಪ್ರದರ್ಶನ ಗುಂಡೂರಿಯ ಸತ್ಯನಾರಾಯಣ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದ ಉದ್ಘಾಟನೆಯನ್ನು ತುಂಬೆದಲೆಕ್ಕಿ ಭಜನಾ ಮಂಡಳಿ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿಮಜಲು ನೆರವೇರಿಸಿದರು. ವಿವಿಧ ತಳಿಯ ಸುಮಾರು 185 ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಜಾನುವಾರುಗಳ ನಿರ್ವಹಣೆ ಹಾಗೂ ಲಾಭದಾಯಕ ಹೈನುಗಾರಿಕೆ ಬಗ್ಗೆ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಜಾನುವಾರುಗಳಲ್ಲಿ ಬಂಜೆತನ ಸಮಸ್ಯೆ ಹಾಗೂ ಹೆಣ್ಣು ಕರುಗಳ ಸಾಕಾಣಿಕೆ ಬಗ್ಗೆ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಚಂದ್ರಶೇಖರ್ ಭಟ್, ಹಸಿರುಮೇವು ಹಾಗೂ ಪಶು ಆಹಾರದ ಬಳಕೆ ಬಗ್ಗೆ ಒಕ್ಕೂಟದ ವಿಸ್ತರಣಾಧಿಕಾರಿ ನಿರಂಜನ ಬಿ.ಎಸ್. ಮಾಹಿತಿ ನೀಡಿದರು. ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಕಾರ್ಯಕ್ರಮ ಸಂಯೋಜಿಸಿದ್ದರು.

ADVERTISEMENT

ಸಮಾರೋಪದ ಅಧ್ಯಕ್ಷತೆಯನ್ನು ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಮಾರ ಹೆಗ್ಡೆ ವಹಿಸಿದ್ದರು. ಒಕ್ಕೂಟದ ನಿರ್ದೇಶಕರಾದ ಬಿ.ನಿರಂಜನ ಭಾವಂತಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ವ್ಯವಸ್ಥಾಪಕ ನಿರ್ದೇಶಕ ಡಿ.ವಿವೇಕ್, ಪಶು ಸಂಗೋಪನಾ ಇಲಾಖೆಯ ಡಾ.ದಿನೇಶ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಪಿ.ದೇಜಪ್ಪ ಶೆಟ್ಟಿ ಕರಿಮಣೇಲು, ಮೋಹನ ಅಂಡಿಂಜೆ, ಸುಧಾಕರ ಪೂಜಾರಿ ಪೆರಿಂಜೆ, ಜಗದೀಶ್ ನಾಯಕ್ ಗಾಂಧಿನಗರ, ಪ್ರಭಾಕರ ಹುಲಿಮೇರು ಆರಂಬೋಡಿ, ನಿರ್ಮಲ್ ಕುಮಾರ್ ಕುಕ್ಕೇಡಿ, ಮ್ಯಾಕ್ಸಿಂ ಸಿಕ್ವೆರಾ ಪಡಂಗಡಿ, ಪ್ರಕಾಶ್ ಭಟ್ ಮೂಡುಕೋಡಿ, ಅಶೋಕ್ ಕಜಿಪಟ್ಟ ಹೊಸಪಟ್ಣ, ಗುಂಡೂರಿ ಸಂಘದ ಉಪಾಧ್ಯಕ್ಷ ಜೋಸ್ಲಿ ಫರ್ನಾಂಡಿಸ್, ಕಾರ್ಯದರ್ಶಿ ರಾಜು ಪೂಜಾರಿ ಭಾಗವಹಿಸಿದ್ದರು.

ಗುಂಡೂರಿ ಶ್ರೀಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಪಿ.ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿ, ಉಪಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ವಂದಿಸಿದರು. ವಿಸ್ತರಣಾಧಿಕಾರಿ ಸುಚಿತ್ರಾ ನಿರ್ವಹಿಸಿದರು.

ಗುಂಡೂರಿಯ ಶ್ರೀಸತ್ಯನಾರಾಯಣ ಭಜನಾ ಮಂದಿರದ ವಠಾರದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.