ಉಳ್ಳಾಲ (ದಕ್ಷಿಣ ಕನ್ನಡ): ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಚೆಂಬುಗುಡ್ಡೆಯ ಗುಡ್ಡ ಕುಸಿದಿದೆ. ಹಲವು ಮರಗಳು ಉರುಳಿದ್ದು, ಮಣ್ಣು ಕುಸಿಯುತ್ತಲೇ ಇದೆ.
ಅಪಾಯವನ್ನು ಅರಿತ ಸ್ಥಳೀಯ ಪ್ರಮುಖರು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವರದಿ ಸಂಗ್ರಹಿಸಿದ್ದು, ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.
ಮಳೆ ಕಡಿಮೆಯಾದರೂ ಮಣ್ಣು ಕುಸಿಯುತ್ತಲೇ ಇರುವ ಕಾರಣ, ಉಳ್ಳಾಲ ನಗರಸಭೆ ಸದಸ್ಯ ಬಾಝಿಲ್ ಡಿಸೋಜ ಅವರು ಎಂಜಿನಿಯರ್ ಜೊತೆ ಮಾತುಕತೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಸಂಚಾರಿ ಠಾಣೆಗೆ ಏಕಮುಖ ಸಂಚಾರಕ್ಕೆ ಸಲಹೆ ನೀಡಲಾಯಿತು.
ಸಂಚಾರಿ ಠಾಣೆ ಪೊಲೀಸರ ಸಮ್ಮುಖದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಆಪ್ತ ಸಹಾಯಕ ಪ್ರಕಾಶ್ ಪಿಂಟೊ, ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಫ್ವಾನ್ ಕೆರೆಬೈಲ್, ಸ್ಥಳೀಯರಾದ ತಂಝೀಲ್, ಇರ್ಫಾನ್, ತೌಸೀಫ್ ,ನಿಯಾಝ್, ಸಿರಾಜ್, ನವಾಝ್, ಇರ್ಫಾಝ್, ಸಿನಾನ್, ಕೆಲ್ವಿನ್, ಡೊನಾಲ್ಡ್ ಪಿಂಟೊ ಮತ್ತಿತರರು ಗೋಣಿಚೀಲ ಹಾಗೂ ಬ್ಯಾರಿಕೇಡ್‌ಗಳನ್ನು ಇಟ್ಟು ಗುಡ್ಡ ಕುಸಿತದ ರಸ್ತೆಯ ಭಾಗವನ್ನು ಬಂದ್ ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.