ADVERTISEMENT

ಇಂಡಿಯಾನಾ: ಕ್ಲಿಷ್ಟ ಶಸ್ತ್ರಚಿಕಿತ್ಸೆ ಯಶಸ್ವಿ

ವೃದ್ಧ ವ್ಯಕ್ತಿಯ ಜೀವ ಉಳಿಸಿದ ಆಸ್ಪತ್ರೆ, ಎರಡೇ ದಿನದಲ್ಲಿ ಮನೆಗೆ ಮರಳಿದ ರೋಗಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 13:03 IST
Last Updated 28 ಜೂನ್ 2021, 13:03 IST
ಇಂಡಿಯಾನಾ ಆಸ್ಪತ್ರೆಯ ಮುಖ್ಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ  ಸಾಧನೆಯ ಬಗ್ಗೆ ಸೋಮವಾರ ಮಾಹಿತಿ ನೀಡಿದರು. ವೈದ್ಯ ತಂಡದ ಸದಸ್ಯರೂ ಇದ್ದರು.
ಇಂಡಿಯಾನಾ ಆಸ್ಪತ್ರೆಯ ಮುಖ್ಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ  ಸಾಧನೆಯ ಬಗ್ಗೆ ಸೋಮವಾರ ಮಾಹಿತಿ ನೀಡಿದರು. ವೈದ್ಯ ತಂಡದ ಸದಸ್ಯರೂ ಇದ್ದರು.   

ಮಂಗಳೂರು: ‘ವೃದ್ಧ ರೋಗಿಯೊಬ್ಬರಿಗೆ ಅಪರೂಪದ ಕ್ಲಿಷ್ಟಕರ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಮಹತ್ವದ ಸಾಧನೆ ಮಾಡಿದೆ. ಅವರನ್ನು ಎರಡೂವರೆ ದಿನಗಳ ಬಳಿಕ ಬಿಡುಗಡೆ ಮಾಡಿದ್ದು, ಅವರೀಗ ಸ್ವಸ್ಥ ಜೀವನ ನಡೆಸುತ್ತಿದ್ದಾರೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ತಿಳಿಸಿದರು.

ಗೋವಾ ನಿವಾಸಿ ವಯೋವೃದ್ಧರಾದ ಆಹ್ಮದ್ ಖಾನ್ ಎಂಬುವರಿಗೆ ಇಂಡಿಯಾನಾ ಆಸ್ಪತ್ರೆಯ ಮುಖ್ಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ನೇತೃತ್ವದ ವೈದ್ಯರ ತಂಡ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಧಮನಿಯ ಬ್ಲಾಕ್‌ಗಳನ್ನು ಅಂಜಿಯೊಪ್ಲಾಸ್ಟಿ ಮತ್ತು ಟ್ರಾನ್ಸ್-ಕ್ಯಾತಿಟರ್ ಮಹಾಪಧಮನಿಯ ಕವಾಟದ ಕಸಿ, ಇಂಪ್ಲಾಂಟೇಶನ್ (ಟಿಎವಿಐ) ನಡೆಸಿ, ಜೀವ ಉಳಿಸಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ರಕ್ತ ಧಮನಿಯಲ್ಲಿ ಅನೇಕ ಬ್ಲಾಕ್‍ಗಳನ್ನು ಹೊಂದಿ ಮಹಾಪಧಮನಿಯ ಕವಾಟದ ಸ್ಟೆನೋಸಿಸ್‍ನಿಂದ ಬಳಲುತ್ತಿದ್ದ ಆಹ್ಮದ್ ಖಾನ್ ಎದೆ ನೋವು, ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಅಸ್ವಸ್ಥರಾಗಿ ಚಕಿತ್ಸೆಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಪ್ರದೇಶದ ಅನೇಕ ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಸಂಪರ್ಕಿಸಿದ್ದರು, ಆದರೆ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಇಂಡಿಯಾನಾ ಸಿದ್ಧಹಸ್ತ ಎಂದು ತಿಳಿಸಿದ ನಂತರ, ಇಲ್ಲಿಗೆ ಆಗಮಿಸಿದ್ದರು ಎಂದರು.

ADVERTISEMENT

ಇಂಡಿಯಾನಾ ಆಸ್ಪತ್ರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ಟಿಎವಿಐ ಪ್ರದರ್ಶನವನ್ನುಎರಡು ವರ್ಷಗಳ ಹಿಂದೆ ನೀಡಿತ್ತು. ಹಲವಾರು ರೋಗಿಗಳಿಗೆ ಟಿಎವಿಐ ಚಿಕಿತ್ಸೆ ನಡೆಸಿದೆ. ಆದರೂ, ಇದೇ ಮೊದಲ ಬಾರಿಗೆ ನಡೆಸಲಾಗಿದೆ. ಡಾ.ಮಂಜುನಾಥ್ ಸುರೇಶ್ ಪಂಡಿತ್, ಡಾ.ಸಿದ್ಧಾರ್ಥ್ ವಿ.ಟಿ, ಡಾ.ಲತಾ ಆರ್., ಡಾ.ಪ್ರಾಚಿ ಶರ್ಮಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.