ADVERTISEMENT

ಜೈನರ ಬಗ್ಗೆ ಅವಹೇಳನಕಾರಿ ಪೋಸ್ಟ್: ದೂರು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 18:12 IST
Last Updated 17 ಡಿಸೆಂಬರ್ 2020, 18:12 IST

ಮೂಡುಬಿದಿರೆ: ಜೈನ ಮುನಿ ಹಾಗೂ ಜೈನರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಲ್ಲಬೆಟ್ಟುನ ಅಕ್ಷಯ ಜೈನ್ ಎಂಬುವವರು ಮೂಡುಬಿದಿರೆ ಪೊಲೀಸರಿಗೆ ಬುಧವಾರ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

‘ಹುಡುಗಿ ನಮಸ್ಕರಿಸಲು ಬರುವಾಗ ಮುನಿ ವರ್ತನೆ ಬದಲಾಗುತ್ತೆ. ಹಿಂದುತ್ವ ಎಷ್ಟು ಗ್ರೇಟ್. ಲಿಂಗಾಯತ ಮತ ಪ್ರಾರಂಭವಾದದ್ದು ಬ್ರಾಹ್ಮಣನಿಂದ, ಜೈನ ಮತ ಪ್ರಾರಂಭವಾದದ್ದು ಕೂಡ ಬ್ರಾಹ್ಮಣನಿಂದ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಲ್ಲರೂ ನೆಮ್ಮದಿಯಿಂದ ಇರಲಿ. ಲಿಂಗಾಯತ, ಜೈನ, ಬೌದ್ಧರು ಮಣ್ಣುಮುಕ್ಕಿ ಹೋಗಲಿ. ಲಿಂಗಾಯತ, ಜೈನ ಮತ್ತು ಬೌದ್ಧರು ಹಿಂದೂಗಳಾಗಿಯೂ ಹಿಂದುತ್ವವನ್ನು ಒಡೆದವರು' ಎಂದು ವಾಣಿಶ್ರೀ ಎಂ. ಎಂಬ ಖಾತೆಯಿಂದ ಫೇಸ್‌ಬುಕ್‌ನಲ್ಲಿ, ಜೈನ ಬಳಗ ಫೇಸ್‌ಬುಕ್ ಗ್ರೂಪ್‌ನಲ್ಲಿ ಪೋಸ್ಟ್‌ ಆಗಿದೆ.

ಈ ಹೇಳಿಕೆ ಧರ್ಮ, ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಗೆ ಕಾರಣವಾಗುತ್ತದೆ. ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಈ ಪೋಸ್ಟ್ ಹಾಕಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.