ADVERTISEMENT

ಮಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 18:40 IST
Last Updated 10 ಅಕ್ಟೋಬರ್ 2025, 18:40 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಮಂಗಳೂರು: ‘ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗ ನಾಯಕತ್ವ ಬದಲಾವಣೆ ಅವಶ್ಯಕತೆ ಬರುವುದಿಲ್ಲ, ಆ ಚರ್ಚೆ ಅಪ್ರಸ್ತುತ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷದ ಹೈಕಮಾಂಡ್ ಇದೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದರು.

ADVERTISEMENT

‘ಸಚಿವರಾದ ಸತೀಶ ಜಾರಕಿಹೊಳಿ, ಜಿ. ಪರಮೇಶ್ವರ ಮತ್ತು ಎಚ್‌.ಸಿ. ಮಹದೇವಪ್ಪ ಅವರೆಲ್ಲ ಸ್ನೇಹಿತರು. ಅವರು ಆಗಾಗ ಭೇಟಿಯಾಗುತ್ತಿರುತ್ತಾರೆ. ಇದಕ್ಕೊಂದು ಕಥೆ ಕಟ್ಟುವ ಅಗತ್ಯವಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೃತ್ಯಗಳ ಕುರಿತ ಎಸ್‌ಐಟಿ ತನಿಖೆ ಹಸ್ತಕ್ಷೇಪ ಇಲ್ಲದೆ ನಡೆದಿದೆ. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮವಾಗುತ್ತದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದರು.

ಸಂಪುಟ ವಿಸ್ತರಣೆ ಎಂಬುದು ಮುಖ್ಯಮಂತ್ರಿ ಪರಮಾಧಿಕಾರ. ಇದೇ 13ರಂದು ಸಿ.ಎಂ ಕರೆದಿರುವ ಔತಣ ಕೂಟಕ್ಕೆ ನಾವೆಲ್ಲರೂ ಭಾಗವಹಿಸಲಿದ್ದೇವೆ’
ಈಶ್ವರ ಖಂಡ್ರೆ ಅರಣ್ಯ ಸಚಿವ

ಸಚಿವನಾಗುವ ಆಸೆಯಿದೆ: ಸಲೀಂ

ಕೊಪ್ಪಳ: ‘ನನಗೂ ಸಚಿವನಾಗುವ ಆಸೆಯಿದೆ. ಮೊದಲ ಅವಧಿಯಲ್ಲೇ ಮಂತ್ರಿ ಸ್ಥಾನ ಸಿಗಬೇಕಿತ್ತು’ ಎಂದು ಮೇಲ್ಮನೆಯ ಮುಖ್ಯ ಸಚೇತಕ ಸಲೀಂ ಅಹಮದ್‌ ಹೇಳಿದರು. ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಿಂದೆ ಸಚಿವ ಸ್ಥಾನ ನೀಡದೇ  ಏಕೆ ಕೈಬಿಟ್ಟರು ಎನ್ನುವುದು ಗೊತ್ತಿಲ್ಲ. ಈ ಬಾರಿ ಆಗುವ ಭರವಸೆಯಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.