ADVERTISEMENT

ಯಕ್ಷಗಾನದಲ್ಲಿ ಹಾಸ್ಯ ಸ್ಫೋಟಿಸಿದ ‘ಕುಕ್ಕರ್’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:43 IST
Last Updated 8 ಡಿಸೆಂಬರ್ 2022, 13:43 IST
ಮೂಲ್ಕಿಯ ಬಪ್ಪನಾಡು ಯಕ್ಷಗಾನ ಮೇಳದ ಯಕ್ಷಗಾನದಲ್ಲಿ ಕುಕ್ಕರ್ ಬಾಂಬ್‌ ಹಾಸ್ಯದೊಂದಿಗೆ ಕಲಾವಿದರು
ಮೂಲ್ಕಿಯ ಬಪ್ಪನಾಡು ಯಕ್ಷಗಾನ ಮೇಳದ ಯಕ್ಷಗಾನದಲ್ಲಿ ಕುಕ್ಕರ್ ಬಾಂಬ್‌ ಹಾಸ್ಯದೊಂದಿಗೆ ಕಲಾವಿದರು   

ಮೂಲ್ಕಿ: ಮಂಗಳೂರಿನಲ್ಲಿ ಈಚೆಗೆ ನಡೆದ ಕುಕ್ಕರ್ ಸ್ಫೋಟ ಪ್ರಕರಣವು ಯಕ್ಷಗಾನದಲ್ಲಿಯೂ ಪ್ರತಿಧ್ವನಿಸಿದ್ದು, ಈ ಹಾಸ್ಯ ಸನ್ನಿವೇಶದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೂಲ್ಕಿಯ ಬಪ್ಪನಾಡು ಯಕ್ಷಗಾನ ಮಂಡಳಿ ಮೇಳದ ‘ಭಂಡಾರ ಚಾವಡಿ’ ಪ್ರಸಂಗದಲ್ಲಿ ಈ ದೃಶ್ಯವನ್ನು ಸೇರಿಸಲಾಗಿದೆ. ರಾಜ (ನಂದಿಕೂರು ರಾಮಕೃಷ್ಣ)ನ ಆಸ್ಥಾನಕ್ಕೆ ಬರುವ ಕಲಾವಿದ (ಕೊಡಪದವು ದಿನೇಶ್ ಶೆಟ್ಟಿಗಾರ್), ‘ತನಗೆಲ್ಲೂ ಮನೆಯನ್ನು ನೀಡುತ್ತಿಲ್ಲ. ತನ್ನ ಹತ್ತಿರದ ಚೀಲದಲ್ಲಿನ ವಸ್ತುಗಳನ್ನು ನೋಡಿ ಬೆಚ್ಚಿ ಬೀಳುತ್ತಿದ್ದಾರೆ’ ಎಂದು ತನ್ನಲ್ಲಿದ್ದ ಗೋಣೀಚೀಲದಲ್ಲಿನ ಬಟ್ಟೆಗಳನ್ನು ತೆಗೆಯುತ್ತಾ... ಕೊನೆಗೆ ಸಣ್ಣ ಕುಕ್ಕರನ್ನು ತೆಗೆದಾಗ ರಾಜ ಹೆದರಿ ಓಡುವ ದೃಶ್ಯ ಈ ಸನ್ನಿವೇಶದಲ್ಲಿದೆ. ಈ ದೃಶ್ಯವು ಈಗ ಪರ–ವಿರೋಧ ಚರ್ಚೆಗೂ ವೇದಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT