ವಿಟ್ಲ: ಸಹಕಾರ ಸಂಘಗಳು ಸ್ವಾಭಿಮಾನಿ ಬದುಕು ರೂಪಿಸಲು ನೆರವಾಗುತ್ತವೆ. ದಕ್ಷತೆಯ ಸಹಕಾರಿಗಳು ಇದ್ದಾಗ ಸಂಘಗಳು ಯಶಸ್ವಿಯಾಗಿ ಬೆಳೆಯುತ್ತವೆ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ ಕಾರಣ ಒಡಿಯೂರು ಸೌಹಾರ್ದ ಸಹಕಾರಿ ಸಂಘ ಉನ್ನತ ಸ್ಥಾನಕ್ಕೆ ಏರಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಸಂಸ್ಥಾನದಲ್ಲಿ ಶುಕ್ರವಾರ ನಡೆದ ಒಡಿಯೂರು ಶ್ರೀಸೌಹಾರ್ದ ಸಹಕಾರ ಸಂಘದ 14ನೇ ವರ್ಷದ ಸಾಮಾನ್ಯ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಹಕಾರ ಸಂಘಗಳ ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ನಗುಮೊಗದ ಸೇವೆ ಅಗತ್ಯ. ಕೊಡು– ಕೊಳ್ಳುವಿಕೆಯ ನಡುವೆ ಹೊಂದಾಣಿಕೆ ಮತ್ತು ಕೃತಜ್ಞತೆಯ ಮನೋಭಾವ ರೂಪಿಸಿಕೊಳ್ಳಬೇಕು. ಉತ್ತಮ ವ್ಯವಹಾರದಿಂದ ಸತತ ಸಾಧನಾ ಪ್ರಶಸ್ತಿಗಳು ಬರುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು.
ಸಾಧ್ವಿಶ್ರೀ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು.
ಸಂಘದ ಅಧ್ಯಕ್ಷ ಎ.ಸುರೇಶ್ ರೈ ಮಾತನಾಡಿ, ಸಂಘವು 2024–25ನೇ ಸಾಲಿನಲ್ಲಿ ₹ 2,227 ಕೋಟಿ ವ್ಯವಹಾರ ನಡೆಸಿ ₹ 5.50 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 21ರಷ್ಟು ಲಾಭಾಂಶ ನೀಡಲಾಗಿದೆ. ನಿರ್ದೇಶಕರು ಮತ್ತು ಸಿಬ್ಬಂದಿಯ ಸಹಕಾರದಿಂದ ಪಾರದರ್ಶಕ ವ್ಯವಹಾರ ನಡೆಸಲಾಗುತ್ತಿದೆ. ಒಡಿಯೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಘವು 23 ಶಾಖೆಗಳನ್ನು ಹೊಂದಿದೆ. 41 ಸಾವಿರ ಸದಸ್ಯರನ್ನು ಹೊಂದಿದೆ ಎಂದರು.
ಶಾಸನಬದ್ಧ ಲೆಕ್ಕ ಪರಿಶೋಧಕರ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ಆಯ್ಕೆ ಮಾಡಲಾಯಿತು.
ವಿಕಾಸ ವಾಹಿನಿ ಸ್ವಸಹಾಯ ಸಂಘದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿಯನ್ನು ಗುರುತಿಸಲಾಯಿತು. ಅತ್ಯುತ್ತಮ ಪ್ರಗತಿ ತೋರಿದ ಶಾಖೆಗಳಿಗೆ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕರಾದ ಶಾರದಾ ಮಣಿ, ಸರಿತಾ ಅಶೋಕ್, ಗಣಪತಿ ಭಟ್ ಸೇರಾಜೆ, ವೇಣುಗೋಪಾಲ ಮಾರ್ಲ, ದೇವಪ್ಪ ನಾಯಕ್ ಉಪ್ಪಳಿಗೆ, ತಾರಾನಾಥ ಶೆಟ್ಟಿ, ಸೋಮಪ್ಪ ನಾಯ್ಕ್, ಗಣೇಶ ಅತ್ತಾವರ, ಲೋಕನಾಥ ಶೆಟ್ಟಿ, ಭವಾನಿಶಂಕರ ಶೆಟ್ಟಿ, ಅಶೋಕ್ ಕುಮಾರ್ ಯು.ಎಸ್., ಜಯಪ್ರಕಾಶ್ ರೈ, ನೂಜಿಬೈಲು, ಕರುಣಾಕರ ಜೆ.ಉಚ್ಚಿಲ, ಮೋನಪ್ಪ ಪೂಜಾರಿ ಕೆರೆಮನೆ ಭಾಗವಹಿಸಿದ್ದರು.
ಕೇಂದ್ರ ಕಚೇರಿ ಹಾಗೂ ಶಾಖಾ ಕಚೇರಿಗಳ ವ್ಯವಸ್ಥಾಪಕರು, ಸಿಬ್ಬಂದಿ ಭಾಗವಹಿಸಿದ್ದರು.
ಶ್ರದ್ಧಾ ಶೆಟ್ಟಿ ಪ್ರಾರ್ಥಿಸಿದರು. ಸಿಇಒ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ನಿರ್ದೇಶಕ ದೇವಪ್ಪ ನಾಯಕ್ ಉಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.