ADVERTISEMENT

ಮಂಗಳೂರು: ಕೊರೊನಾ ಹೆಸರಲ್ಲಿ ಪೋಸ್ಟರ್‌ ಸಮರ

ಮತ್ತೆ ಕಾಣಿಸಿದ ಮತೀಯ ದ್ವೇಷದ ಫಲಕಗಳು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:49 IST
Last Updated 8 ಏಪ್ರಿಲ್ 2020, 16:49 IST

ಮಂಗಳೂರು: ಕೊರೊನಾ ವೈರಸ್‌ ಸೋಂಕಿನ ನೆಪದಲ್ಲಿ ಉಳ್ಳಾಲ ಭಾಗದಲ್ಲಿ ಪೋಸ್ಟರ್‌ ಸಮರ ಮುಂದುವರಿದಿದೆ. ಮಂಗಳವಾರ ರಾತ್ರಿಯಿಂದ ಮತ್ತಷ್ಟು ಕಡೆಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಕುಂಪಲದ ಆಶ್ರಯ ಕಾಲೋನಿಯಲ್ಲಿ ಮುಸ್ಲಿಂ ವ್ಯಾಪಾರಿಗಳ ಪ್ರವೇಶ ವಿರೋಧಿಸಿ ಪೋಸ್ಟರ್‌ ಹಾಕಲಾಗಿದೆ. ಆದರೆ, ಕಲ್ಲಾಪುವಿನ ಮುಸ್ಲಿಮರು ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಧರ್ಮದ ಜನರಿಗೂ ನೆರವು ಒದಗಿಸುವುದಾಗಿ ಸೌಹಾರ್ದ ಬಯಸುವ ಪೋಸ್ಟರ್‌ ಹಾಕಿದ್ದಾರೆ.

‘ಆಶ್ರಯ ಕಾಲೋನಿ ನಾಗರಿಕರ ಹಿತದೃಷ್ಟಿಯಿಂದ ಕೊರೊನಾ ವೈರಸ್‌ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸಲ್ಮಾನ ವ್ಯಾಪಾರಿಗೆ ಪ್ರವೇಶವಿಲ್ಲ’– ಹಿಂದೂ ಬಾಂಧವರು, ಆಶ್ರಯ ಕಾಲೋನಿ ಕುಂಪಲ ಎಂಬ ಪೋಸ್ಟರ್‌ ಕುಂಪಲದಲ್ಲಿ ಕಂಡುಬಂದಿದೆ.

ADVERTISEMENT

‘ಕಲ್ಲಾಪುವಿನ ಸರ್ವ ಧರ್ಮೀಯರೇ (ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌), ಕೊರೊನಾ ಲಾಕ್‌ ಡೌನ್‌ ಸಮಯದಲ್ಲಿ ತಮಗೇನಾದರೂ ನಮ್ಮ ಸಹಾಯ ಅಗತ್ಯವಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂ‍ಪರ್ಕಿಸಬಹುದು. ಯಾವುದೇ ಹಿಂದೂ ವ್ಯಾಪಾರಸ್ಥರು ಮುಕ್ತವಾಗಿ ನಮ್ಮೂರಿನಲ್ಲಿ ವ್ಯಾಪಾರ ಮಾಡಬಹುದು. ಸಹಾಯ, ಸಹಕಾರಕ್ಕಾಗಿ ಸರ್ವ ಧರ್ಮೀಯರಿಗೂ ನಾವು ಸಿದ್ಧರಿದ್ದೇವೆ’– ಇತೀ ಮುಸ್ಲಿಂ ಬಾಂಧವರು, ಕಲ್ಲಾಪು ಎಂಬ ಪೋಸ್ಟರ್‌ ಅನ್ನು ಕಲ್ಲಾಪುವಿನಲ್ಲಿ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.