ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಈಗಾಗಲೇ 195 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಶುಕ್ರವಾರ ಮತ್ತೆ 40 ಮಂದಿಗೆ ಸೋಂಕು ದೃಢಪಟ್ಟಿದೆ.
ವೃದ್ಧರು,ಮಾನಸಿಕಅಸ್ವಸ್ಥರು,ನಿರ್ಗತಿಕರಿರುವ ಈ ಆಶ್ರಮದಲ್ಲಿ 270 ಮಂದಿ ವಾಸ್ತವ್ಯ ಇದ್ದು, ಈ ಪೈಕಿ 195 ಮಂದಿಗೆ ನಾಲ್ಕು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಶಾಸಕ ಹರೀಶ್ ಪೂಂಜ ಅವರ ಸಲಹೆಯಂತೆ 135 ಸೋಂಕಿತರನ್ನು ಈಗಾಗಲೇ ಧರ್ಮಸ್ಥಳದಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ಮೂವರನ್ನು ಬೆಳ್ತಂಗಡಿಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಕೋವಿಡ್ ದೃಢಪಟ್ಟ 40 ಮಂದಿ ಪೈಕಿ 18 ಮಂದಿಗೆ ಜ್ವರ, ಶೀತ ಬಾಧೆ ಇದ್ದು, ಅವರನ್ನು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಗೆ ಹಾಗೂ ಉಳಿದ 22 ಮಂದಿಯನ್ನು ಧರ್ಮಸ್ಥಳದ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ ಶುಶ್ರೂಷೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.