ADVERTISEMENT

ಕ್ರೀಡೆಯಿಂದ ಸಂಸ್ಕೃತಿ ಅರಿವು: ಶಾಸಕ ರಾಜೇಶ ನಾಯ್ಕ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:46 IST
Last Updated 22 ಸೆಪ್ಟೆಂಬರ್ 2024, 13:46 IST
ಬಂಟ್ವಾಳ ತಾಲ್ಲೂಕಿನ ಪಚ್ಚಿನಡ್ಕ ಓಂ ಫ್ರೆಂಡ್ಸ್ ವತಿಯಿಂದ ನಡೆದ ‘ಕೆಸರ್ದ ಕಂಡೊಡು ಕುಸಲ್ದ ಪಂಥ’ ಕಾರ್ಯಕ್ರಮದಲ್ಲಿ ಕೃಷಿಕ ಬಟ್ಟತ್ತೋಡಿ ಉಮೇಶ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು
ಬಂಟ್ವಾಳ ತಾಲ್ಲೂಕಿನ ಪಚ್ಚಿನಡ್ಕ ಓಂ ಫ್ರೆಂಡ್ಸ್ ವತಿಯಿಂದ ನಡೆದ ‘ಕೆಸರ್ದ ಕಂಡೊಡು ಕುಸಲ್ದ ಪಂಥ’ ಕಾರ್ಯಕ್ರಮದಲ್ಲಿ ಕೃಷಿಕ ಬಟ್ಟತ್ತೋಡಿ ಉಮೇಶ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು   

ಬಂಟ್ವಾಳ: ತುಳುನಾಡಿನ ಕೃಷಿಕರು ಕಠಿಣ ಪರಿಶ್ರಮದಿಂದ ಕೃಷಿಯ ಜತೆಗೆ ಇಲ್ಲಿನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದು, ಕೆಸರುಗದ್ದೆ ಕ್ರೀಡೆ ಯುವಜನತೆಗೆ ಸಂಸ್ಕೃತಿಯನ್ನು ಪರಿಚಯಿಸುತ್ತಿದೆ ಎಂದು ಶಾಸಕ ಯು.ರಾಜೇಶ ನಾಯ್ಕ್ ಹೇಳಿದರು.

ಇಲ್ಲಿನ ಪಚ್ಚಿನಡ್ಕ ಓಂ ಫ್ರೆಂಡ್ಸ್ ವತಿಯಿಂದ ನಡೆದ ‘ಕೆಸರ್ದ ಕಂಡೊಡು ಕುಸಲ್ದ ಪಂಥ’ ಕಾರ್ಯಕ್ರಮದಲ್ಲಿ ಕೃಷಿಕ ಬಟ್ಟತ್ತೋಡಿ ಉಮೇಶ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಉದ್ಯಮಿ ಭುವನೇಶ್ ಪಚ್ಚಿನಡ್ಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ADVERTISEMENT

ಮಾಜಿ ಸಚಿವ ಬಿ.ರಮಾನಾಥ ರೈ, ಉದ್ಯಮಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ, ಶೇಖರ್ ಶೆಟ್ಟಿ ಪೊಟ್ಟುಗುಡ್ಡೆ, ವಿಶ್ವನಾಥ ದಾಸರಕೋಡಿ, ಡೇವಿಡ್ ರಾಡ್ರಿಗಸ್, ಮಲ್ಲಿಕಾ ಡಿ.ರೈ ಪಚ್ಚಿನಡ್ಕ, ದಯಾನಂದ ರೈ, ಜಯಲಕ್ಷ್ಮಿ ಪಚ್ಚಿನಡ್ಕ, ದಿನೇಶ್ ಪಡೆಂಕಿಲ್ ಮಾರ್, ಸತೀಶ್ ಅಮೀನ್ ಪಡು, ಪದ್ಮನಾಭ ಪೂಜಾರಿ ಪಡೆಂಕಿಲ್ ಮಾರ್, ಉಮೇಶ್ ಶೆಟ್ಟಿ ಕಯ್ಯಾಳಿಮಾರ್ ಗುತ್ತು, ವಿಜಯ್ ಕುಮಾರ್ ಅಮ್ಟಾಡಿ ಭಾಗವಹಿಸಿದ್ದರು.

ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಕಂಬಳ ಕೋಣಗಳ ಓಟ, ವಿವಿಧ ವಿಭಾಗದಲ್ಲಿ ಕೆಸರುಗದ್ದೆ ಕ್ರೀಡೆ ನಡೆಯಿತು.

ಹರೀಶ್ ಶೆಟ್ಟಿ ಪಡು ಸ್ವಾಗತಿಸಿ, ದಿನೇಶ ಸುವರ್ಣ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.