ADVERTISEMENT

ಆತ್ಮಹತ್ಯೆ ತಡೆ ಜಾಗೃತಿಗೆ ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 14:06 IST
Last Updated 6 ಅಕ್ಟೋಬರ್ 2019, 14:06 IST
ಮಂಗಳೂರಿನ ಐಎಂಎ ಹೌಸ್‌ನಿಂದ ಸೇಂಟ್‌ ಅಲೋಶಿಯಸ್‌ ಕಾಲೇಜಿನವರೆಗೆ ಸೈಕಲ್ ಜಾಥಾ ನಡೆಯಿತು. ಪ್ರಜಾವಾಣಿ ಚಿತ್ರ
ಮಂಗಳೂರಿನ ಐಎಂಎ ಹೌಸ್‌ನಿಂದ ಸೇಂಟ್‌ ಅಲೋಶಿಯಸ್‌ ಕಾಲೇಜಿನವರೆಗೆ ಸೈಕಲ್ ಜಾಥಾ ನಡೆಯಿತು. ಪ್ರಜಾವಾಣಿ ಚಿತ್ರ   

ಮಂಗಳೂರು: ಆತ್ಮಹತ್ಯೆ ತಡೆ ಮತ್ತು ಮುನ್ನೆಚ್ಚರಿಕೆ ಕುರಿತು ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಗರದ ಸೇಂಟ್‌ ಆಗ್ನೆಸ್ ಕಾಲೇಜಿನಿಂದ ಕಾಲ್ನಡಿಗೆ ಜಾಥಾ ಮತ್ತು ಮಂಗಳೂರು ಐಎಂಎ ಹೌಸ್‌ನಿಂದ ಸೈಕಲ್ ಜಾಥಾ ನಡೆಯಿತು.

ನಗರದ ಸೇಂಟ್‌ ಅಲೋಶಿಯಸ್ ಕಾಲೇಜಿನ ಎರಿಕ್ ಮಾಥಾಯಿಸ್ ಸಭಾಂಗಣದಲ್ಲಿ ನಡೆದ ‘ಸುಸೈಡ್ ಹೆಲ್ಪ್ ಲೈನ್ 24X7 ಸುಶೇಗ್ ಲೈಫ್ ಲೈನ್’ ವೆಬ್‌ಸೈಟ್‌ಗೆ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಸತೀಶ್ ಭಂಡಾರಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಯು.ಟಿ. ಖಾದರ್, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಈ ಆತ್ಮಹತ್ಯೆ ಪ್ರಕರಣದಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಯುವ ಪೀಳಿಗೆಯಲ್ಲಿ ಆತ್ಮಸ್ಥೈರ್ಯದ ಕೊರತೆ. ಎಲ್ಲಿಯವರೆಗೆ ನಾವು ಯುವ ಪೀಳಿಗೆಗೆ ಆತ್ಮಸ್ಥೈರ್ಯ ತುಂಬುದಿಲ್ಲವೋ, ಅಲ್ಲಿವರೆಗೆ ಈ ರೀತಿಯ ಘಟನೆ ನಡೆಯುತ್ತವೆ ಎಂದರು.

ADVERTISEMENT

ಈ ರೀತಿಯ ವೆಬ್‌ಸೈಟ್‌ಗಳು ಯುವ ಪೀಳಿಗೆಗೆ ಆತ್ಮಹತ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ಶಾಸಕ ಡಿ. ವೇದವ್ಯಾಸ ಕಾಮತ್‌, ಸಂಗೀತ ನಿರ್ದೇಶಕ ಗುರುಕಿರಣ್, ಸೇಂಟ್‌ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ಫಾ.ಡಾ. ಪ್ರವೀಣ್ ಮಾರ್ಟಿಸ್, ಅಭಯ ಆಸ್ಪತ್ರೆ ಅಧ್ಯಕ್ಷ ಡಾ.ಎ. ಜಗದೀಶ್, ಫಾ.ಮೆಲ್ವಿನ್ ಪಿಂಟೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.