ADVERTISEMENT

ಮುಡಿಪು: ಹರೇಕಳ ಅಣೆಕಟ್ಟೆ ವೀಕ್ಷಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 12:32 IST
Last Updated 9 ಸೆಪ್ಟೆಂಬರ್ 2023, 12:32 IST
ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಅವರು ಶನಿವಾರ ಹರೇಕಳ ಅಣೆಕಟ್ಟೆ ವೀಕ್ಷಿಸಿದರು
ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಅವರು ಶನಿವಾರ ಹರೇಕಳ ಅಣೆಕಟ್ಟೆ ವೀಕ್ಷಿಸಿದರು   

ಮುಡಿಪು: ಸಣ್ಣ ನೀರಾವರಿ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಅವರು ಸಣ್ಣ ನೀರಾವರಿ ಇಲಾಖೆಯು ಹರೇಕಳದಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ ಕಾಮಗಾರಿ ವೀಕ್ಷಿಸಿದರು.

ನೇತ್ರಾವದಿ ನದಿ ತಟದ ಹರೇಕಳ, ಅಂಬ್ಲಮೊಗರು ಪ್ರದೇಶಗಳಿಗೂ ಭೇಟಿ ಅಲ್ಲಿನ ಸಮಸ್ಯೆ, ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು.

ವಿಧಾನಪರಿಷತ್‌ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷ ಅಬ್ದುಲ್ ಮಜೀದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್, ಯು.ಟಿ.ಇಫ್ತಿಕಾರ್ ಅಲಿ, ಬಶೀರ್ ಉಂಬುದ, ಸತ್ತಾರ್ ಬಾವಲಿಗುರಿ, ಹನೀಫ್, ಸಿದ್ದೀಕ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.