ADVERTISEMENT

ಬಂಟ್ವಾಳ: ಅಮ್ಮೆಮಾರ್ ಮನೆಗಳಿಗೆ ಕುಸಿತದ ಭೀತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:32 IST
Last Updated 4 ಜುಲೈ 2022, 4:32 IST
ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿ ಮನೆಯೊಂದರ ಬದಿ ಸಂಪೂರ್ಣ ಕುಸಿದು ಬಿದ್ದಿದೆ
ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿ ಮನೆಯೊಂದರ ಬದಿ ಸಂಪೂರ್ಣ ಕುಸಿದು ಬಿದ್ದಿದೆ   

ಬಂಟ್ವಾಳ: ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿ ಹಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ.

ಇಲ್ಲಿನ ಪದೆಂಜಾರು ನಿವಾಸಿ ನಾರಾಯಣ ಮುಕಾರಿ ಎಂಬವರ ಮನೆ ಹಿಂಬದಿ ಸಂಪೂರ್ಣ ಕುಸಿದು ಬಿದ್ದಿದೆ. ಈ ಹಿಂದೆಯೇ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಹಾಜಿರ ಮತ್ತು ಉಸ್ಮಾನ್ ಎಂಬವರ ಮನೆ ಹಿಂಬದಿ ಕುಸಿತಕ್ಕೀಡಾಗಿದ್ದು, ಇವರು ಮನೆ ತೊರೆದಿದ್ದಾರೆ.

ಇನ್ನೊಂದೆಡೆ ಪಕ್ಕದ ಗಂಗು ಮುಕಾರಿ, ಫಝಲ್ ಎಂಬವರ ಮನೆ ಕುಸಿತದ ಭೀತಿ ಎದುರಿಸುತ್ತಿದೆ. ಗೀತಾ ಎಂಬವರ ಮನೆಯ ಆವರಣಗೋಡೆ ಕುಸಿದಿದ್ದು, ಮಳೆ ಹಾನಿಗೀಡಾದ ಮನೆಗಳಿಗೆ ಸೂಕ್ತ ಪರಿಹಾರಧನವೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.