ತೋಕೆ ಕಾಮಿಲ್ ಸಖಾಫಿ
ಮಂಗಳೂರು: ಬಂಟ್ವಾಳದ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆ ಅಧೀನದ ಕೆಜಿಎನ್ ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ 'ಮುಈನುಸ್ಸುನ್ನಃ' ನೀಡುವ 'ಫಿದಾಕ್ ಪ್ರಶಸ್ತಿ 2025–26‘ಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯದ್ದೀನ್ ಕಾಮಿಲ್ ಸಖಾಫಿ ತೋಕೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ₹ 25,000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಂಸ್ಥೆಯ ಪ್ರಾಂಶುಪಾಲ ಸೈಯದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಬರಹಗಾರ ಎಸ್.ಪಿ. ಹಂಝ ಸಖಾಫಿ ,ಹಾಗೂ ಎ.ಕೆ. ನಂದಾವರ ಅವರನ್ನೊಳಗೊಂಡ ಸಮಿತಿಯು ಇವರನ್ನು ಆಯ್ಕೆ ಮಾಡಿದೆ.
ಜನವರಿ 12 ರಂದು ನಡೆಯುವ ಕೆಜಿಎನ್ ದಅ್‌ವಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ 'ಫಿದಾಕ್ ' ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಏಳು ಅರೇಬಿಕ್, 11 ಕನ್ನಡ ಹಾಗೂ ಒಂದು ಮಲಯಾಳ ಕೃತಿ ರಚಿಸಿದ್ದಾರೆ. ದಿವಗಂತ ಎನ್.ಎಂ ಉಸ್ತಾದರ ದರ್ಸ್ ಶಿಷ್ಯರಾಗಿರುವ ಸಖಾಫಿ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಯಲ್ಲಿ ‘ಕಾಮಿಲ್ ಸಖಾಫಿ‘ ಪದವಿ ಪಡೆದು ವಿವಿಧ ಕಡೆಗಳಲ್ಲಿ ಮುದರ್ರಿಸ್ ಆಗಿ ಸೇವೆಗೈದಿದ್ದಾರೆ. ಪ್ರಸ್ತುತ ನಚ್ಚಬೆಟ್ಟು ದಾರುಲ್ ಮುಸ್ತಫಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.