ADVERTISEMENT

ಮಂಗಳೂರಿನಲ್ಲಿ 35.9 ಡಿ.ಸೆ:ದಿನದ ಗರಿಷ್ಠ ತಾಪಮಾನ ದಾಖಲು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 16:56 IST
Last Updated 11 ನವೆಂಬರ್ 2020, 16:56 IST

ಮಂಗಳೂರು: ರಾಜ್ಯದ ವಿವಿಧೆಡೆ ಕೆಲ ದಿನಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿರುವ ನಡುವೆಯೇ, ಬುಧವಾರ ದೇಶದಲ್ಲೇ ದಿನದ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ಮಂಗಳೂರಿನಲ್ಲಿ ದಾಖಲಾಗಿದೆ.

ಬುಧವಾರದ ಗರಿಷ್ಠ ತಾಪಮಾನವು ವಾಡಿಕೆಗಿಂತ ಅಂದಾಜು 1.6 ಡಿಗ್ರಿ ಸೆಲ್ಸಿಯಸ್‌ಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಇತ್ತು. ಆದರೆ, ಕೆಲ ದಿನಗಳಿಂದ ಜಿಲ್ಲೆಯ ಕೆಲವೆಡೆ ನಸುಕಿನಲ್ಲಿ ಮಂಜು ಮುಸುಕಿದ ವಾತಾವರಣವೂ ಕಂಡು ಬಂದಿತ್ತು.

ದೇಶದಲ್ಲಿ ಬುಧವಾರದ ದಿನದ ಕನಿಷ್ಠ ತಾಪಮಾನವು ಮಧ್ಯಪ್ರದೇಶದ ಮಾಂಡ್ಲಾ 8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.