ADVERTISEMENT

ಕಾಲೇಜು ದಿನಗಳ ಮೆಲುಕು ಹಾಕಿದ ಡಿಸಿಎಂ ಅಶ್ವತ್ಥ ನಾರಾಯಣ

ಐಡಿಯಲ್‌ನಲ್ಲಿ ಐಸ್‌ಕ್ರೀಂ ಸವಿದ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 11:21 IST
Last Updated 1 ನವೆಂಬರ್ 2019, 11:21 IST
ಮಂಗಳೂರಿನ ಜಿಎಚ್‌ಎಸ್ ರಸ್ತೆಯಲ್ಲಿರುವ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಗುರುವಾರ ಐಸ್‌ಕ್ರೀಂ ಸವಿದರು.
ಮಂಗಳೂರಿನ ಜಿಎಚ್‌ಎಸ್ ರಸ್ತೆಯಲ್ಲಿರುವ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಗುರುವಾರ ಐಸ್‌ಕ್ರೀಂ ಸವಿದರು.   

ಮಂಗಳೂರು: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಗುರುವಾರನಗರಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಯಂತೆ ನಗರದ ಹಲವೆಡೆ ಸುತ್ತಾಡಿ ಹಳೆಯ ನೆನಪುಗಳ ಬುತ್ತಿ ಬಿಚ್ಚಿಟ್ಟರು.

ತಮ್ಮ ಗೆಳೆಯರ ಜತೆಗೂಡಿ ಗುರುವಾರ ಸಂಜೆ ನಗರದ ಜಿಎಚ್‌ಎಸ್ ರಸ್ತೆಯಲ್ಲಿರುವ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ಗೆ ಭೇಟಿ ನೀಡಿದ ಡಾ. ಅಶ್ವಥ್ ನಾರಾಯಣ, ಐಸ್‌ಕ್ರೀಂ ಸವಿದು ಕಾಲೇಜು ದಿನಗಳ ಬಗ್ಗೆ ಚರ್ಚೆ ನಡೆಸಿದರು.

ಡಾ.ಅಶ್ವಥ ನಾರಾಯಣ ಅವರ ಜತೆಗೆ ಶಾಸಕರಾದ ರಾಜೇಶ್ ನಾಯಕ್, ಡಾ.ಭರತ್ ಶೆಟ್ಟಿ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಇದ್ದರು.

ADVERTISEMENT

ಈ ಸಂದರ್ಭ ಸುದ್ದಿಗಾರರ ಜತೆಗೆ ಮಾತನಾಡಿದ ಡಾ.ಅಶ್ವಥ ನಾರಾಯಣ, ‘1988ರಿಂದ 1994ರವರೆಗೆ ನಾನು ಕೆಎಂಸಿ ವಿದ್ಯಾರ್ಥಿಯಾಗಿದ್ದೆ. ಕಾಲೇಜು ದಿನಗಳಲ್ಲಿ ಆಗಾಗ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ಗೆ ಬಂದು ಐಸ್‌ಕ್ರೀಂ ಸವಿಯುತ್ತಿದ್ದೆ. ಕಾಲೇಜು ವ್ಯಾಸಾಂಗ ಮುಗಿಸಿ ರಾಜಕಾರಣದಲ್ಲಿ ಸಕ್ರಿಯರಾದರೂ ಕೂಡಾ ಇಲ್ಲಿನ ನೆನಪು ಮಾಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.