ADVERTISEMENT

ಮಂಗಳೂರು: ಕಾಳಿಕಾಂಬಾ ದೇವಸ್ಥಾನದಲ್ಲಿ ದೀಪ ಪೂಜನ

​ಪ್ರಜಾವಾಣಿ ವಾರ್ತೆ
Published 18 ಮೇ 2024, 5:57 IST
Last Updated 18 ಮೇ 2024, 5:57 IST
   

ಮಂಗಳೂರು: ನಗರದ ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲದ ಆಶ್ರಯದಲ್ಲಿ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಶಿಬಿರದ ಅಂಗವಾಗಿ ಬುಧವಾರ ಮಹಿಳೆಯರಿಂದ ‘ದೀಪ ಪೂಜನ’ ಕಾರ್ಯಕ್ರಮ ನಡೆಯಿತು.

ಪಡುಕುತ್ಯಾರಿನ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ದೀವಾನ ಲೋಲಾಕ್ಷ ಶರ್ಮ ಮತ್ತು ಪಂಚಮ್ ಶರ್ಮ ದೀಪ ಪೂಜನದ ವೈಶಿಷ್ಟ್ಯ ಹಾಗೂ ಮಹತ್ವದ ಕುರಿತು ಮಾತನಾಡಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ನವೀನ್ ಆಚಾರ್ಯ ಜಪ್ಪಿನಮೊಗರು, ಮಧುರ ಕ್ಯಾಟರ್ಸ್‌ನ ದಿನೇಶ್ ಟಿ. ಮತ್ತು ಪ್ರಸಾದ್ ಟಿ., ಸಿವಿಲ್ ಎಂಜಿನಿಯರ್ ಗುರುಪ್ರಸಾದ್ ಕನೀರ್‌ತೋಟ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸುಂದರ ಆಚಾರ್ಯ ಮರೋಳಿ ವೇದಿಕೆಯಲ್ಲಿದ್ದರು.

ADVERTISEMENT

ಗುರುಸೇವಾ ಪರಿಷತ್ ಪದಾಧಿಕಾರಿಗಳಾದ ಗಣೇಶ ಆಚಾರ್ಯ ಕೆಮ್ಮಣ್ಣು, ಶೇಖರ ಆಚಾರ್ಯ ಮಂಗಳಾದೇವಿ, ಗುರುರಾಜ್ ಕೆ.ಜೆ., ಸತೀಶ್ ಆಚಾರ್ಯ ಸುರುಳಿ, ಪ್ರಕಾಶ್ ಆಚಾರ್ಯ ಹಲೇಜಿ, ಉಮೇಶ್ ಆಚಾರ್ಯ ತೀರ್ಥಹಳ್ಳಿ, ಹರೀಶ್ ಆಚಾರ್ಯ ಮೊದಲಾದವರು ಪಾಲ್ಗೊಂಡಿದ್ದರು.

ಮೇ 19ರಂದು ಸಂಜೆ ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿಬಿರ ಸಮಾರೋಪಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.