ADVERTISEMENT

ಬೆಳ್ತಂಗಡಿ: ‘ಬೆಳ್ತಂಗಡಿಅಭಿವೃದ್ಧಿ ಕಾರ್ಯಗಳು ಪರಿಸರ ಪೂರಕವಾಗಿರಲಿ’

‘ಪರಿಸರ ಮತ್ತು ಜೀವಸಂಕುಲಗಳು’ ವಿಷಯ ಕುರಿತ ವಿಶೇಷ ಉಪನ್ಯಾಸದಲ್ಲಿ ಜಗದೀಶ್ ಬಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:00 IST
Last Updated 6 ಫೆಬ್ರುವರಿ 2023, 6:00 IST
ಡಾ. ಜಗದೀಶ್ ಬಾಳ ವಿಶೇಷ ಉಪನ್ಯಾಸ ನೀಡಿದರು
ಡಾ. ಜಗದೀಶ್ ಬಾಳ ವಿಶೇಷ ಉಪನ್ಯಾಸ ನೀಡಿದರು   

ಬೆಳ್ತಂಗಡಿ: ‘ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಮಾತ್ರ ಸುಸ್ಥಿರ ಅಭಿವೃದ್ಧಿ ಎಂದು ಪರಿಗಣಿಸಲ್ಪಡುತ್ತದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು’ ಎಂದು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶು ಪಾಲ ಡಾ. ಜಗದೀಶ್ ಬಾಳ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ‘ಪರಿಸರ ಮತ್ತು ಜೀವಸಂಕುಲಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಪರಿಸರ ನಮ್ಮ ಹಿರಿಯರಿಂದ ಸಿಕ್ಕ ಬಳುವಳಿ. ಅದನ್ನು ಅದೇ ರೀತಿ ಯಾಗಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಆದರೆ ಅಂತಹ ಕಾರ್ಯ ನಡೆಯುತ್ತಿಲ್ಲ. ಇಂದು ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿ ನಡೆಯುತ್ತಿಲ್ಲ ಬದಲಾಗಿ ಅನಾಹುತದ ದಾರಿಯಾಗುತ್ತಿದೆ ಎಂದರು.

ಕರಾವಳಿಯ ಪ್ರಮುಖ ಆಚರಣೆಗಳಲ್ಲಿ ಒಂದಾದ ನಾಗಾರಾಧನೆ ಪ್ರಾಕೃತಿಕವಾಗಿ ಬನದ ಪರಿಕಲ್ಪನೆಯೊಳಗೆ ಇರುತ್ತಿತ್ತು. ಒಂದು ಒಣಗಿದ ರೆಂಬೆಯನ್ನು ಕಡಿಯಬೇಕಾದರೂ ಪ್ರಶ್ನೆಯಿ ಡಬೇಕಾಗಿತ್ತು. ಆದರೆ ಇಂದಿನ ದಿನಮಾನದಲ್ಲಿ ನಾಗನ ಕಲ್ಲುಗಳನ್ನು ಸಿಮೆಂಟ್ ಪೆಟ್ಟಿಗೆಯೊಳಗೆ ಇರಿಸಲಾ ಗುತ್ತಿದೆ. ಇದು ಅಭಿವೃದ್ಧಿಯ ಪರಿಕಲ್ಪನೆ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ಪ್ರಕೃತಿಯ ಅಚ್ಚುಕಟ್ಟಾದ ವ್ಯವಸ್ಥೆಯಾದ ಗಿಡಮರಗಳನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂದು ಅವರು ತಿಳಿಸಿದರು.

ADVERTISEMENT

ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಜಿ. ಶ್ರೀಧರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.