ADVERTISEMENT

ಧರ್ಮಸ್ಥಳ: ನೆಲದಡಿ ಮೃತದೇಹಗಳ ಅವಶೇಷ ಪತ್ತೆಗೆ ತಂತ್ರಜ್ಞಾನ ಬಳಕೆ?

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 21:29 IST
Last Updated 6 ಆಗಸ್ಟ್ 2025, 21:29 IST
ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ತೀರದಲ್ಲಿ ಮೃತದೇಹಗಳನ್ನು ಹೂತುಹಾಕಿರುವುದಾಗಿ ಸಾಕ್ಷಿ ದೂರುದಾರ ಗುರುತಿಸಿದ್ದ  ಜಾಗದಲ್ಲಿ ಶೋಧಕಾರ್ಯ ಮುಗಿಸಿ ಬರುತ್ತಿರುವ ಸಿಬ್ಬಂದಿ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ತೀರದಲ್ಲಿ ಮೃತದೇಹಗಳನ್ನು ಹೂತುಹಾಕಿರುವುದಾಗಿ ಸಾಕ್ಷಿ ದೂರುದಾರ ಗುರುತಿಸಿದ್ದ  ಜಾಗದಲ್ಲಿ ಶೋಧಕಾರ್ಯ ಮುಗಿಸಿ ಬರುತ್ತಿರುವ ಸಿಬ್ಬಂದಿ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲದಡಿ ಮೃತದೇಹದ ಅವಶೇಷಗಳ ಪತ್ತೆ‌ ಹಚ್ಚ ಲು ತಂತ್ರಜ್ಞಾನ ಬಳಸಲು ಹಾಗೂ ಖಚಿತವಾದರೆ ಮಾತ್ರ ಅಗೆಯುವ ಕಾರ್ಯ ಮುಂದುವರಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿಂತನೆ ನಡೆಸಿದೆ.

ಎಸ್‌ಐಟಿಯವರು ನೇತ್ರಾವತಿ ಸ್ನಾನಘಟ್ಟದ ಸಮೀಪ ಹೆದ್ದಾರಿ ಪಕ್ಕದ ಕಾಡಿನೊಳಗೆ 8ನೇ ದಿನವೂ (ಬುಧವಾರ) ಶೋಧ ಕಾರ್ಯ ಮುಂದುವರಿಸಿದರು.

ಆ ಜಾಗದಲ್ಲಿ ಮೃತದೇಹವನ್ನು ಹೂತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.