ಧರ್ಮಸ್ಥಳ ಪ್ರಕರಣ
ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೃತ್ಯಗಳಿಗೆ ಸಂಬಂಧಿಸಿ ಸಾಕ್ಷಿ ದೂರುದಾರನನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದ ಅನುಮತಿ ಕೋರಿದೆ.
ಹಿಂದೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 183ರ ಅಡಿ ಈ ಹಿಂದೆ ಸಾಕ್ಷಿದೂರುದಾರನ ಹೇಳಿಕೆ ದಾಖಲಿಸಲಾಗಿತ್ತು. ಈ ವೇಳೆ ತಾನು, ಕೊಲೆ ಮತ್ತು ಲೈಂಗಿಕ ದೌರ್ಜನ್ಯ ನಡೆದಿರುವ 10 ಮೃತದೇಹಗಳನ್ನು ಹೂತುಹಾಕಿರುವ ಬಗ್ಗೆ ಸಾಕ್ಷಿದೂರುದಾರ ಹೇಳಿಕೊಂಡಿದ್ದ.
‘ನಂತರದ ದಿನಗಳಲ್ಲಿ ಎಸ್‌ಐಟಿ ಇನ್ನಿತರ ಸಂಬಂಧಪಟ್ಟ ವ್ಯಕ್ತಿಗಳ ವಿಚಾರಣೆ ನಡೆಸಿದಾಗ, ಶವಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಕಾನೂನುಬದ್ಧವಾಗಿ ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗಗೊಂಡಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಸಾಕ್ಷಿದೂರುದಾರನ ಹೇಳಿಕೆಯಲ್ಲಿ ವ್ಯತಿರಿಕ್ತ ಅಂಶ ಕಂಡಬಂದ ಕಾರಣ, ಅವುಗಳ ಮರುಪರಿಶೀಲನೆಗೆ ಉದ್ದೇಶಿಸಲಾಗಿದೆ. ಸಾಕ್ಷಿದೂರುದಾರನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಿಲ್ಲ. ಬದಲಾಗಿ, ಆತ ಇರುವ ಶಿವಮೊಗ್ಗ ಜೈಲಿಗೆ ಭೇಟಿ ನೀಡಿ ಪ್ರಶ್ನಿಸಲು ಅನುಮತಿ ಕೇಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.