ADVERTISEMENT

ಧರ್ಮಸ್ಥಳ ಪ್ರಕರಣ | ಕ್ಷೇತ್ರದ ಪರವಾಗಿ ದೃಢವಾಗಿ ನಿಲ್ಲಿ: ವಜ್ರದೇಹಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:18 IST
Last Updated 2 ಸೆಪ್ಟೆಂಬರ್ 2025, 4:18 IST
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯಲ್ಲಿ ಸೋಮವಾರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಮೇಲಿನ ಅವಹೇಳನ ಖಂಡಿಸಿ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲ್ಲೂಕು ವತಿಯಿಂದ ನಡೆದ ಜನಾಗ್ರಹ ಸಭೆಯಲ್ಲಿ ಬಿಜೆಪಿ ಮುಖಂಡ ನಳಿನ್‌ಕುಮಾರ್ ‌ಕಟೀಲ್ ‌ಮಾತನಾಡಿದರು
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯಲ್ಲಿ ಸೋಮವಾರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಮೇಲಿನ ಅವಹೇಳನ ಖಂಡಿಸಿ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲ್ಲೂಕು ವತಿಯಿಂದ ನಡೆದ ಜನಾಗ್ರಹ ಸಭೆಯಲ್ಲಿ ಬಿಜೆಪಿ ಮುಖಂಡ ನಳಿನ್‌ಕುಮಾರ್ ‌ಕಟೀಲ್ ‌ಮಾತನಾಡಿದರು   

ಪುತ್ತೂರು: ‘ನಮ್ಮಲ್ಲಿರುವ ಸಂಶಯಗಳನ್ನು ಬಿಟ್ಟುಬಿಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವ ವಿಚಾರದಲ್ಲಿ ಎಲ್ಲರೂ ಏಕ ಮನಸ್ಕರಾಗಿ ದೃಢವಾಗಿ ನಿಂತು ಕ್ಷೇತ್ರವನ್ನು ಉಳಿಸಲು ಮುಂದಾಗಬೇಕು’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯಲ್ಲಿ ಸೋಮವಾರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಮೇಲಿನ ಅವಹೇಳನ ಖಂಡಿಸಿ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲ್ಲೂಕು ವತಿಯಿಂದ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳದ ಕುರಿತು ಕೃತಕತೆಯನ್ನು ಬಿಂಬಿಸಿ ಅಪಮಾನಿಸುವ ಷಡ್ಯಂತ್ರ ನಡೆಯಿತು. ಇದನ್ನೆಲ್ಲಾ ನೋಡಿಯೂ ನಾವು ಸುಮ್ಮನಿರುವುದೇ ದುರಂತ. ಕೆಲವರು ಅಹಂನಿಂದ ಮಾಡುತ್ತಿರುವ ಈ ಕೃತ್ಯಗಳಿಗೆ ಧರ್ಮಸ್ಥಳ ಕ್ಷೇತ್ರದ ದೇವರು ಕೆಲವೇ ದಿನಗಳಲ್ಲಿ ಇತಿಶ್ರೀ ಹಾಡಲಿದ್ದಾರೆ ಎಂದರು.

ADVERTISEMENT

ಬಿಜೆಪಿ ಮುಖಂಡ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ, ಸರ್ಕಾರಗಳು  ಮಾಡಬಹುದಾದ ಕಾರ್ಯಗಳನ್ನು ಧರ್ಮಸ್ಥಳದ ಒಂದು ದೇವಾಲಯ ಮಾಡಿದೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸುವ ಮೂಲಕ ಕ್ಷೇತ್ರಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಸೌಜನ್ಯಳಿಗೂ ನ್ಯಾಯ ಸಿಗಬೇಕಾಗಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ವಕೀಲ ಕೇಶವ ಗೌಡ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿದರು.

ಪ್ರಮುಖರಾದ ಪದ್ಮನಾಭ ಶೆಟ್ಟಿ, ರಾಧಾಕೃಷ್ಣ ಆಳ್ವ, ಮಲ್ಲಿಕಾ ಪಕ್ಕಳ, ಲೀಲಾವತಿ ಅಣ್ಣು ನಾಯ್ಕ, ಅಶ್ವಿನ್ ಎಲ್.ಶೆಟ್ಟಿ, ಯು.ಪೂವಪ್ಪ, ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ನಿರ್ಮಲ್ ಕುಮಾರ್ ಜೈನ್, ಚಿದಾನಂದ ಬೈಲಾಡಿ, ಆರ್.ಸಿ.ನಾರಾಯಣ, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ.ಸುರೇಶ್ ಪುತ್ತೂರಾಯ, ಶ್ರೀರಾಮ ಭಟ್ ಬಂಗಾರಡ್ಕ, ರವೀಂದ್ರನಾಥ ಶೆಟ್ಟಿ ನುಳಿಯಾಲು, ರಾಧಾಕೃಷ್ಣ ನಾಯ್ಕ್‌, ಕೃಷ್ಣಪ್ರಸಾದ್ ಆಳ್ವ, ಪಿ.ಬಿ.ಶಿವಕುಮಾರ್, ಚಂದ್ರಶೇಖರ ಬಪ್ಪಳಿಗೆ, ನನ್ಯ ಅಚ್ಯುತ ಮೂಡೆತ್ತಾಯ, ಯು.ಲೋಕೇಶ್ ಹೆಗ್ಡೆ, ಮಾರಪ್ಪ ಶೆಟ್ಟಿ, ಶ್ರೀಕೃಷ್ಣ ಬೊಳ್ಳಿಲ್ಲಾಯ, ಡಾ.ಅಶೋಕ್ ಪಡಿವಾಳ್, ಗೌರಿ ಬನ್ನೂರು, ಶಿವನಾಥ ರೈ ಮೇಗಿನಗುತ್ತು, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಮುರಳಿಕೃಷ್ಣ ಹಸಂತಡ್ಕ, ಎ.ಕೆ.ಜಯರಾಮ ರೈ, ವಿಠಲ ರೈ ಬಾಲ್ಯೊಟ್ಟು, ನವೀನ್ ಕುಮಾರ್, ಅಜಿತ್ ಕುಮಾರ್ ಜೈನ್, ವಿ.ಕೆ.ಜೈನ್, ನರೇಂದ್ರ ಪಡಿವಾಳ್, ಕೃಷ್ಣವೇಣಿ, ಉದಯ ಕುಮಾರ್, ಬಲರಾಮ ಆಚಾರ್ಯ, ವಾಸು ಪೂಜಾರಿ ಗುಂಡ್ಯಡ್ಕ, ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು.

ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಮಹಾಬಲ ರೈ ವಳತ್ತಡ್ಕ ವಂದಿಸಿದರು. ಬಾಲಕೃಷ್ಣ ಪೊರ್ದಾಳ್‌ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.