ADVERTISEMENT

ಧರ್ಮಸ್ಥಳ: ವಸತಿಗಾಗಿ ಯಾತ್ರಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:26 IST
Last Updated 10 ಆಗಸ್ಟ್ 2021, 3:26 IST
ಧರ್ಮಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳ ಎದುರು ರಾತ್ರಿ ಕಳೆದ ಯಾತ್ರಿಕರು
ಧರ್ಮಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳ ಎದುರು ರಾತ್ರಿ ಕಳೆದ ಯಾತ್ರಿಕರು   

ಉಜಿರೆ: ಭಾನುವಾರ ರಾತ್ರಿ ಧರ್ಮಸ್ಥಳಕ್ಕೆ ಬಂದ ಯಾತ್ರಿಕರು ಊಟ, ವಸತಿ ಇಲ್ಲದೆ ಪರದಾಡಬೇಕಾಯಿತು. ಜಿಲ್ಲಾಡಳಿತದ ನಿರ್ದೇಶನದಂತೆ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆ ಹಾಗೂ ಪ್ರಸಾದಕ್ಕೆ ಅವಕಾಶವಿಲ್ಲ. ಊಟ, ವಸತಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.

ಜಡಿ ಮಳೆಯ ನಡುವೆ ಯಾತ್ರಿಕರು ಅಂಗಡಿ-ಮುಗ್ಗಟ್ಟುಗಳ ಎದುರು ಮಲಗಿ ರಾತ್ರಿ ಕಳೆದರು. ಕೆಲವರು ಹೊದಿಕೆ ಇಲ್ಲದೆ ಜಾಗರಣೆ ಮಾಡಿದರು. ಧರ್ಮಸ್ಥಳದಲ್ಲಿ ಮುಡಿಸೇವೆ (ತಲೆಕೂದಲು ತೆಗೆಯುವುದು)ಗೂ ಅವಕಾಶವಿಲ್ಲ. ಹಾಗಾಗಿ ಬಂದವರೆಲ್ಲ ಉಜಿರೆಗೆ ಹೋಗೆ ಸೆಲೂನ್‍ಗಳಲ್ಲಿ ತಲೆ ಕೂದಲು ತೆಗೆಸಿದರು. ಉಜಿರೆಯಲ್ಲಿ ಎಲ್ಲ ಹೋಟೆಲ್‍ಗಳ ಕೊಠಡಿಗಳೂ ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT