ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ವತಿಯಿಂದ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ‘ಶ್ರಾವಕೋತ್ತಮ ಚಿಂತಾಮಣಿ’ ಉಪಾಧಿ ಪ್ರದಾನ ಮಾಡಲಾಯಿತು
ಉಜಿರೆ (ದಕ್ಷಿಣ ಕನ್ನಡ): ಮೈಸೂರಿನಲ್ಲಿರುವ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ನೇತೃತ್ವದಲ್ಲಿ ಅರ್ಚಕರು, ಶಾಸ್ತ್ರಿಗಳು, ಉಪಾಧ್ಯಾಯರು ಗುರುವಾರ ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಮಂಗಲಾಷ್ಟಕ, ಪಂಚನಮಸ್ಕಾರ ಮಂತ್ರ ಪಠಣ, ಭಕ್ತಾಮರ ಸ್ತೋತ್ರ ಪಠಿಸಿದರು. ಧರ್ಮಸ್ಥಳ ಹಾಗೂ ಹೆಗ್ಗಡೆ ಅವರಿಗೆ ಬಂದ ಅಪವಾದ ನಿವಾರಣೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನ, ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಬಾಹುಬಲಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿದರು.
ಹೆಗ್ಗಡೆ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೈಸೂರಿನ ಮೋಹನಕುಮಾರ ಶಾಸ್ತ್ರಿ, ಶಾಂತಿನಾಥ ಉಪಾಧ್ಯಾಯ, ಹೇಮಾ ಉಪಾಧ್ಯಾಯ ಮಂಗಲಾಷ್ಟಕ ಹಾಗೂ ಜಿನಗೀತೆ, ಶಾಂತಿಮಂತ್ರ ಪಠಿಸಿದರು.
ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ವತಿಯಿಂದ ಹೆಗ್ಗಡೆ ಅವರಿಗೆ ‘ಶ್ರಾವಕೋತ್ತಮ ಚಿಂತಾಮಣಿ’ ಉಪಾಧಿ ನೀಡಿ ಗೌರವಿಸಲಾಯಿತು.
ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಅವರನ್ನೂ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.