ಉಳ್ಳಾಲ: ಇಸ್ಲಾಮಿಕ್ ಶಿಕ್ಷಣವು ಯಾವುದೋ ಒಂದು ಭಾಗಕ್ಕೆ ಸೀಮಿತವಾಗಿಲ್ಲ, ಅದು ಇಡೀ ವಿಶ್ವದ ಹಿತಕ್ಕಾಗಿ ವಿಸ್ತರಿಸಿದೆ. ಉಳ್ಳಾಲದ ಮದನಿ ತಂಙಳ್ ಅವರು ಹೇಳಿದಂತೆ, ಶಿಕ್ಷಣದ ಬೆಳಕನ್ನು ಪ್ರಸಾರಗೊಳಿಸಿದರೆ ಮಾತ್ರ ಸಮುದಾಯದ ಪ್ರಗತಿಯನ್ನು ಸಾಧ್ಯವಾಗಿಸಬಹುದು ಎಂದು ದಾರುಲ್ ಅಶ್ ಅರಿಯ್ಯ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಹೇಳಿದರು.
ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಅಧ್ಯಕ್ಷತೆಯಲ್ಲಿ ದರ್ಗಾ ವಠಾರದಲ್ಲಿ ನಡೆಯುವ ಪಂಚವಾರ್ಷಿಕ ಉರುಸ್‌ನಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನಮಗೆ ಸಮಾನವಾಗಿ ಅಗತ್ಯವಿದೆ. ಈ ಸಮನ್ವಯದ ಮೂಲಕ ಮಾತ್ರ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯ. ತಾಜುಲ್ ಉಲಮಾ ಮತ್ತು ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರಂಥ ಮಹಾನ್ ಆಚಾರ್ಯರು ಈ ದಿಕ್ಕಿನಲ್ಲಿ ಅಡಿಪಾಯ ಹಾಕಿ ಬಹುದೊಡ್ಡ ಯಶಸ್ಸು ಸಾಧಿಸಿದ್ದಾರೆ ಎಂದರು.
ಜಿ.ಎಂ. ಕಾಮಿಲ್ ಸಖಾಫಿ ದುಆ ಹಾಗೂ ಧಾರ್ಮಿಕ ಪ್ರವಚನ ನೀಡಿದರು.
ಅತಿಥಿಗಳಾಗಿ ಕಣಚೂರು ಮೆಡಿಕಲ್ ಕಾಲೇಜು ಚೇರ್‌ಮನ್ ಕಣಚೂರು ಮೋನು, ಹೊಸಪಳ್ಳಿ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಇಮಾಮ್ ಅನಸ್ ಅಝ್ ಅರಿ, ಹೊಸಪಳ್ಳಿ ಮಸೀದಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಅಬ್ದುಲ್ ಅಝೀಝ್ ಸಖಾಫಿ, ಕಡಪರ ಚಾರ ಜುಮಾ ಮಸೀದಿ ಖತೀಬ್ ಮುಝಮ್ಮಿಲ್, ಮದನಿ ದರ್ಗಾ ಅಧ್ಯಕ್ಷ ಹನೀಫ್, ಉಳ್ಳಾಲ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ನಾಝೀಮ್ ಮುಕ್ಕಚ್ಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅರೆಬಿಕ್ ಕಾಲೇಜು ಪ್ರಾಧ್ಯಾಪಕ ಇಬ್ರಾಹಿಂ ಅಹ್ಸನಿ, ಜಬ್ಬಾರ್, ಕಬೀರ್ ಉಳ್ಳಾಲ ಭಾಗವಹಿಸಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.