ADVERTISEMENT

43 ಹಿರಿಯ ವೈದ್ಯರಿಗೆ ಸನ್ಮಾನ

ಮೂರು ಸಂಸ್ಥೆಗಳ ನಡುವೆ ಹಾಲು–ಜೇನಿನಂತೆ ಬಾಂಧವ್ಯ: ಶಾಂತಾರಾಮ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:44 IST
Last Updated 14 ಜುಲೈ 2025, 7:44 IST
ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು
ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು   

ಮಂಗಳೂರು: ವೆನ್ಲಾಕ್, ಲೇಡಿಗೋಶನ್ ಹಾಗೂ ಕೆಎಂಸಿ ಹಳೆ ವಿದ್ಯಾರ್ಥಿ ಸಂಘ ಹಾಗೂ ವೆನ್ಲಾಕ್– ಲೇಡಿಗೋಶನ್ ಆಸ್ಪತ್ರೆಗಳ 175ನೇ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ 43 ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.

ಈ ಮೂರು ಸಂಸ್ಥೆಗಳಲ್ಲಿ 25–30 ವರ್ಷ ಕಾರ್ಯ ನಿರ್ವಹಿಸಿದ ವೈದ್ಯರು, ಶಿಕ್ಷಕರು, ಡೀನ್, ಜಿಲ್ಲಾ ಸರ್ಜನ್‌ಗಳನ್ನು ಹಿರಿತನದ ಆಧಾರದಲ್ಲಿ ಗುರುತಿಸಿ ಗೌರವಿಸಲಾಯಿತು.

ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಇನ್ನಷ್ಟು ವೈದ್ಯರು, ನರ್ಸಿಂಗ್ ಅಧಿಕಾರಿಗಳು, ಸಹಾಯ ಸಿಬ್ಬಂದಿ, ಗ್ರೂಪ್ ಡಿ ನೌಕರರನ್ನು ಗುರುತಿಸಿ ಗೌರವಿಸುವ ಯೋಜನೆ ಇದೆ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಹೇಳಿದರು.

ADVERTISEMENT

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ, ವೆನ್ಲಾಕ್, ಲೇಡಿಗೋಶನ್ ಹಾಗೂ ಕೆಎಂಸಿ ಸಂಸ್ಥೆಗಳು ಆರೋಗ್ಯ ಸೇವೆ ನೀಡುವಲ್ಲಿ ಹಾಲು–ಜೇನು– ಸಕ್ಕರೆಯ ಹಾಗೆ ಬೇರ್ಪಡಿಸಲು ಆಗದಷ್ಟು ಸೇವಾ ಬಾಂಧವ್ಯ, ಬದ್ಧತೆ ಹೊಂದಿವೆ ಎಂದರು.

ಕೆಎಂಸಿ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಸುರೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು.

ಸನ್ಮಾನಿತರ ಪರವಾಗಿ ಡಾ. ಎಂ.ವಿ.ಪ್ರಭು, ಡಾ.ಆರ್‌.ಎಂ.ಶೆಣೈ, ಡಾ. ಜೋ ವರ್ಗೀಸ್, ಡಾ.ಸದಾಶಿವ ಶಾನುಭೋಗ, ಡಾ.ವತ್ಸಲಾ ಮಲ್ಯ ಮಾತನಾಡಿದರು. ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ವಂದಿಸಿದರು. ಡಾ. ಸೀತಾರಾಮ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.