ADVERTISEMENT

ಉಳ್ಳಾಲ: ₹3.70 ಲಕ್ಷ ಮೌಲ್ಯದ ಮಾದಕ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 14:10 IST
Last Updated 5 ಡಿಸೆಂಬರ್ 2023, 14:10 IST
ಪೊಲೀಸರು ವಶಪಡಿಸಿಕೊಂಡಿರುವ ಮಾದಕವಸ್ತು, ಮಾರಕಾಸ್ತ್ರಗಳು, ನಗದು
ಪೊಲೀಸರು ವಶಪಡಿಸಿಕೊಂಡಿರುವ ಮಾದಕವಸ್ತು, ಮಾರಕಾಸ್ತ್ರಗಳು, ನಗದು   

ಉಳ್ಳಾಲ: ಉಳ್ಳಾಲ ಪೆರ್ಮನ್ನೂರು ಗ್ರಾಮದ ಸಂತೋಷ ನಗರದ ಸಮೀಪ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 132 ಗ್ರಾಂ ಮೆತಂಫಿಟಮೈನ್ ಮತ್ತು 250 ಎಲ್ಎಸ್‌ಡಿ ಸ್ಟ್ಯಾಂಪ್‌ ಸೇರಿ ಒಟ್ಟು ₹3.70 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. 

ಶಿಶಿರ್ ದೇವಾಡಿಗ ಹಾಗೂ ಶುಶಾನ್ ಎಲ್. ಬಂಧಿತ ಆರೋಪಿಗಳು. ಮಾದಕವಸ್ತು ಸಾಗಣೆಗೆ ಬಳಸಿದ್ದ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಸಿಪಿ ಧನ್ಯಾ ಎನ್. ನಾಯಕ್ ಅವರ ನೇತೃತ್ವದಲ್ಲಿ ಪಿಎಸ್ಐ ಪುನೀತ್ ಗಾಂವ್ಕರ್, ಉಳ್ಳಾಲ ಠಾಣೆ ಪಿಎಸ್ಐ ಸಂತೋಷ್ ಕುಮಾರ್ ಡಿ, ಸಿಬ್ಬಂದಿ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಯಡ್ರಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.