ಉಳ್ಳಾಲ: ಆಧುನಿಕತೆ, ತಾಂತ್ರಿಕ ಬೆಳವಣಿಗೆಗಳ ಪರಿಣಾಮದಿಂದ ಜಗತ್ತು ವೇಗವಾಗಿ ಬದಲಾಗುತ್ತಿದೆ. ಜತೆಗೆ ಜಾಗತಿಕ ಸವಾಲೂ ಹೆಚ್ಚಾಗುತ್ತಿರುವುದರಿಂದ ಪದವೀಧರರ ಜವಾಬ್ದಾರಿ ಹೆಚ್ಚಾಗಿದೆ. ಈ ಕಾರಣದಿಂದ ಶಿಕ್ಷಣದೊಂದಿಗೆ ಆಧುನಿಕತೆಗೆ ಪೂರಕವಾಗಿ ಹೊಸ ಜ್ಞಾನಶಿಸ್ತುಗಳ ಪರಿಣಾಮಕಾರಿ ಅಧ್ಯಯನ ಅಗತ್ಯ ಎಂದು ಭಾರತದ ಜಿ.20 ಶೆರ್ಪಾ ಮತ್ತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದರು.
ಯೆನಪೋಯ ಪರಿಗಣಿತ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ವಿಪುಲ ಅವಕಾಶಗಳೊಂದಿಗೆ ಬದಲಾವಣೆಗಳಿಗೂ ಕಾರಣವಾಗುತ್ತಿವೆ. ವಿದ್ಯಾರ್ಥಿಗಳು, ಯುವ ಸಮುದಾಯ ಈ ಬದಲಾವಣೆಯ ದೀಪಸ್ತಂಭ ಇದ್ದಂತೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಎಂಬ ದೂರದೃಷ್ಟಿ ಯೋಜನೆಯ ಕನಸು ನನಸಾಗಬೇಕಾದರೆ ಪದವೀಧರರು ಸೇರಿದಂತೆ ಯುವ ಸಮುದಾಯದ ಮಂದಿ ದೊಡ್ಡ ಪಾತ್ರವಹಿಸಬೇಕಾಗಿದೆ ಎಂದು ಹೇಳಿದರು.
ವೈದ್ಯಕೀಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯೆನಪೋಯ ವಿಶ್ವವಿದ್ಯಾಲಯದ ಸಾಧನೆ ಮಹತ್ತರವಾದುದು. ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಬೆಳೆಸಿದ ಸಾಂವಿಧಾನಿಕ ಮೌಲ್ಯಗಳು, ಸಮಾನತೆ, ಜವಾಬ್ದಾರಿ ಮತ್ತು ನೈತಿಕ ನಾಯಕತ್ವವು ಮುಂದಿನ ದಿನಗಳಲ್ಲಿ ಅವರ ಬದುಕಿಗೆ ದಾರಿದೀಪವಾಗಬಲ್ಲುದು ಎಂದರು.
ಯೆನೆಪೋಯ ಪರಿಗಣಿತ ವಿವಿಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಞಿ ಅಧ್ಯಕ್ಷತೆ ವಹಿಸಿದ್ದರು.
ವಿವಿ ಕುಲಪತಿ ಡಾ.ಎಂ.ವಿಜಯ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು.
ಉಪಕುಲಪತಿ ಡಾ.ಬಿ.ಎಚ್.ಶ್ರೀಪತಿರಾವ್, ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಪರಿಕ್ಷಾಂಗ ಕುಲಸಚಿವ ಡಾ.ಬಿ.ಟಿ.ನಂದೀಶ್, ವಿವಿಯ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಯೆನೆಪೋಯ ಅಬ್ದುಲ್ಲಾ ಜಾವೆದ್, ಯೆನೆಪೋಯ ಡೆಂಟಲ್ ಕಾಲೇಜ್ ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಛಾತ್ರ, ಯೆನೆಪೋಯ ಮೆಡಿಕಲ್ ಕಾಲೇಜಿನ ಡಾ.ಎಂ.ಎಸ್.ಮೂಸಬ್ಬ, ಸದಸ್ಯರಾದ ಡಾ.ಹರಿಶ್ಚಂದ್ರ ಬಿ., ಸಿಂಧುಪ್ರಿಯಾ ಇ.ಎಸ್., ಮಹಮ್ಮದ್ ಶಾಹಿದ್, ಐಎಇ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಡೆಂಟಲ್ ವಿಭಾಗದ ಡೀನ್ ಡಾ.ಶ್ಯಾಮ್ ಎಸ್ ಭಟ್, ಮೆಡಿಸಿನ್ ವಿಭಾಗದ ಡೀನ್ ಡಾ.ಅಭಯ್ ನಿರ್ಗುಡೆ, ನರ್ಸಿಂಗ್ ವಿಭಾಗದ ಡೀನ್ ಡಾ.ಲೀನಾ ಕೆ.ಸಿ, ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದ ಡೀನ್ ಡಾ.ಸುನಿತಾ ಸಲ್ದಾನ, ವಿಜ್ಞಾನ ವಿಭಾಗದ ಡೀನ್ ಡಾ.ಅರುಣ್, ಫಾರ್ಮಸಿ ವಿಭಾಗದ ಡೀನ್ ಡಾ.ಮಹಮ್ಮದ್ ಗುಲ್ಜಾರ್ ಅಹ್ಮದ್, ಆರ್ಯುವೇದ ವಿಭಾಗದ ಡೀನ್ ಡಾ.ಗುರುರಾಜ, ಹೋಮಿಯೋಪಥಿ ವಿಭಾಗದ ಡೀನ್ ಡಾ.ಶಿವಪ್ರಸಾದ್, ಯೋಗ ಮತ್ತು ನ್ಯಾಚುರೋಪತಿ ವಿಭಾಗದ ಡಾ.ಪುನೀತ್, ಅಕಾಡೆಮಿಕ್ ವಿಭಾಗದ ಡೀನ್ ಡಾ.ಅಶ್ವಿನಿ ದತ್, ವಿದ್ಯಾರ್ಥಿ ವಿಭಾಗದ ಡೀನ್ ಡಾ.ಮಜಿ ಜೋಸ್, ಟ್ರಸ್ಟಿ ಡಾ.ಹಬೀಬ್ ರಹಮಾನ್, ಯೆನೆಪೋಯ ಸ್ಕೂಲ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಆರ್.ಜಿ.ಡಿಸೋಜ ಭಾಗವಹಿಸಿದ್ದರು.
ಘಟಿಕೋತ್ಸವ ಸಮಾರಂಭದಲ್ಲಿ ದಂತವೈದ್ಯ, ವೈದ್ಯಕೀಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ಸ್ನಾತಕೋತ್ತರ ಪದವಿಗಳು, ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕ ಪದವಿ ಪಡೆದ ಸುಮಾರು 2632 ಮಂದಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು.
25 ಮಂದಿಗೆ ಪಿಎಚ್‌ಡಿ ಪ್ರದಾನ ಮಾಡಲಾಯಿತು. ವಿವಿಧ ಸ್ನಾತಕಕೋರ್ಸ್‌ಗಳಲ್ಲಿ ರ್‍ಯಾಂಕ್ ಗಳಿಸಿದ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.