ADVERTISEMENT

ಸಂಹಿತಾ ಸಾಧನೆಗೆ ಶಿಕ್ಷಣ ಸಚಿವರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:18 IST
Last Updated 16 ಆಗಸ್ಟ್ 2022, 16:18 IST
ಸಂಹಿತಾ
ಸಂಹಿತಾ   

ಮಂಗಳೂರು: ವಿಶ್ವ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅಭಿನಂದಿಸಿದ್ದಾರೆ.

ಸಂಹಿತಾ ತಂದೆ ಕದ್ರಿಯ ವಾಸುದೇವ ಭಟ್‌ ಕುಂಜತ್ತೋಡಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಹಿತಾ ಸಾಧನೆಯನ್ನು ಮುಖ್ಯಮಂತ್ರಿಗೆ ತಿಳಿಸುವುದಾಗಿ ಹೇಳಿದರು.

‘ನಾನ್ರಿ ಏಜುಕೇಶನ್‌ ಮಿನಿಸ್ಟ್ರು ಡಿ.ಸಿ. ನಾಗೇಶ್‌ ಮಾತನಾಡೋದು ಎಂದಾ ನನಗೆ ಅಚ್ಚರಿಯಾಯಿತು. ನನ್ನ ನಂಬರ್‌ ಸಂಗ್ರಹಿಸಿ ಕರೆ ಮಾಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ’ ಎಂದು ವಾಸುದೇವ ಭಟ್‌ ಕುಂಜತ್ತೋಡಿ ಪ್ರತಿಕ್ರಿಯಿಸಿದರು. ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಕೂಡ ಕರೆ ಮಾಡಿ ಅಭಿನಂದಿಸಿದ್ದಾರೆ.

ADVERTISEMENT

ವಾಸುದೇವ ಭಟ್‌ ಅವರ ಪತ್ನಿ ದೀಪಾ ಕೆ.ಎಸ್.‌ ಮತ್ತು ಋತ್ವಿಕ್‌ ಅಲೆವೂರಾಯ, ಪವರ್‌ಲಿಫ್ಟಿಂಗ್‌ ವಿಭಾಗದಲ್ಲಿ ಅಂತರರಾಷ್ಟ್ರೀಯ ಕೂಟಗಳಲ್ಲಿ, ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ. ಒಂದೇ ಮನೆಯ ಮೂರು ಮಂದಿ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.