ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ (ಕುಳಿತವರು) ಯುವರಾಜ ಜೈನ್, ಡಾ.ಸಂಜೀವ ರೈ, ಎಂ.ಬಿ.ಪುರಾಣಿಕ್, ರಾಜೇಶ್ವರಿ ಎಚ್.ಎಚ್., ಡಾ.ಎಂ.ಮೋಹನ ಆಳ್ವ, ಎಸ್‌ಲ.ಎಲ್.ಭೋಜೇಗೌಡ, ಕೆ.ಸಿ.ನಾಯ್ಕ್, ನರೇಂದ್ರ ಎಲ್.ನಾಯಕ್ ಹಾಗೂ ಕೆ.ರಾಧಾಕೃಷ್ಣ ಶೆಣೈ ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ
ಮಂಗಳೂರು: ‘ಶಿಕ್ಷಣದಲ್ಲಿ ಎಡವಿದರೆ ಉತ್ತಮ ನಾಡನ್ನು ಕಟ್ಟಲು, ಉತ್ತಮ ಪೀಳಿಗೆಯನ್ನು ರೂಪಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ರ‍್ಯಾಂಕ್ ಪಡೆದ ಮಾತ್ರಕ್ಕೆ ಅವರಿಗೆ ಉತ್ತಮ ಶಿಕ್ಷಣ ಸಿಕ್ಕಿದೆ ಎಂರ್ಥವಲ್ಲ. ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಿದರೆ, ಅದೇ ಉತ್ತಮ ಶಿಕ್ಷಣ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ (ಕುಪ್ಮಾ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಭಾನುವಾರ ಮಾತನಾಡಿದರು.
‘ಮಾನ್ಯತೆ ನವೀಕರಣ ಸಂದರ್ಭದಲ್ಲಿ ಖಾಸಗಿ ಪಿ.ಯು. ಕಾಲೇಜುಗಳಿಗೆ ಸರ್ಕಾರ ಕಿರುಕುಳ ಬೀಡಬಾರದು. ಪಿ.ಯು. ಕಾಲೇಜುಗಳಿಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣಪತ್ರ ಬೇಕೆಂದರೆ ಹೇಗೆ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು’ ಎಂದರು.
‘ಮಾಹಿತಿ ಹಕ್ಕು ಕಾರ್ಯಕರ್ತರು ಇತ್ತೀಚೆಗೆ ನಾಯಿಕೊಡೆಗಳಂತೆ ತಲೆ ಎತ್ತಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತರಲ್ಲ ಸಮಾಜಘಾತಕ ಶಕ್ತಿಗಳು. ಖಾಸಗಿ ಪಿ.ಯು. ಕಾಲೇಜುಗಳು ಅವರಿಗೆ ಹೆದರಬೇಕಿಲ್ಲ. ನಿಮ್ಮ ಜೊತೆ ನಾನಿದ್ದೇನೆ’ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್, ‘ಜಿಲ್ಲೆಯಲ್ಲಿ ಖಾಸಗಿ ಪಿ.ಯು. ಕಾಲೇಜಿಗಳಲ್ಲಿ ಸರ್ಕಾರಿ ಕಾಲೇಜುಗಳಿಗಿಂತಲೂ ಉತ್ತಮ ಸೌಕರ್ಯಗಳಿವೆ. ಶಿಕ್ಷಣದ ಗುಣಮಟ್ಟವು ಚೆನ್ನಾಗಿದೆ’ ಎಂದು ಅಭಿಪ್ರಾಯಪಟ್ಟರು.
ಎಸ್‌ಎಲ್.ಭೋಜೇಗೌಡ ಹಾಗೂ ರಾಜೇಶ್ವರಿ ಎಚ್.ಎಚ್. ಅವರನ್ನು ಸನ್ಮಾನಿಸಲಾಯಿತು.
ಸಂಘದ ಸಂಯೋಜಕ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಯುವರಾಜ ಜೈನ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಂಜುನಾಥ ಎಸ್.ರೆವಣಕರ್ ಧನ್ಯವಾದ ಸಲ್ಲಿಸಿದರು.
ಸಂಘದ ಗೌರವ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್, ಕೆ.ಸಿ.ನಾಯ್ಕ್, ರಾಧಾಕೃಷ್ಣ ಶೆಣೈ, ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕಾರ್ಯದರ್ಶಿ ನರೇಂದ್ರ ನಾಯಕ್ ಭಾಗವಹಿಸಿದ್ದರು.
ಕುಪ್ಮಾ– ದ.ಕ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗೌರವ ಅಧ್ಯಕ್ಷ: ಡಾ.ಸಂಜೀವ ರೈ (ರಾಮಕೃಷ್ಣ ಶಿಕ್ಷಣ ಸಂಸ್ಥೆ ಬಂಟ್ಸ್ ಹಾಸ್ಟೆಲ್ ಮಂಗಳೂರು) ಅಧ್ಯಕ್ಷ: ಯುವರಾಜ್ ಜೈನ್ (ಎಕ್ಸ್‌ಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಮೂಡುಬಿದಿರೆ) ಕಾರ್ಯದರ್ಶಿ: ಮಂಜುನಾಥ ಎಸ್. ರೇವಣಕರ್ ( ಸೂರಜ್ ಶಿಕ್ಷಣ ಸಮೂಹ ಸಂಸ್ಥೆ ಮುಡಿಪು) ಜೊತೆ ಕಾರ್ಯದರ್ಶಿಗಳು: ಅಶ್ವಿನ್ ಶೆಟ್ಟಿ (ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ) ಸುಮಂತ್ ಕುಮಾರ್ ಜೈನ್ (ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆ ಬೆಳ್ತಂಗಡಿ) ಉಪಾಧ್ಯಕ್ಷರು: ಬಿ.ಎ.ನಜೀರ್ (ಆಲ್ ಬದ್ರಿಯಾ ಎಜುಕೇಷನಲ್ ಅಸೋಸಿಯೇಶನ್ ಕೃಷ್ಣಾಪುರ ಸುರತ್ಕಲ್) ಚಂದ್ರಶೇಖರ ರಾಜೇಅರಸ್ ಎಚ್.ಆರ್. ( ನ್ಯೂ ವೈಬ್ರೆಂಟ್ ಕಲ್ಲಬೆಟ್ಟು ಮೂಡಬಿದಿರೆ) ರವೀಂದ್ರ ಪಿ. (ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು) ಪೂರನ್ ವರ್ಮ (ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆ ಉಜಿರೆ) ಗಣೇಶ್ ಪ್ರಸಾದ್ (ಕುಮಾರ ಸ್ವಾಮಿ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ) ರಮೇಶ್ (ಶಕ್ತಿ ಸಮೂಹ ಶಿಕ್ಷಣ ಸಂಸ್ಥೆ ಶಕ್ತಿನಗರ ಮಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.