ಸುಳ್ಯ: ಇಲ್ಲಿನ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.
ಸುಳ್ಯ ಗಾಂಧಿನಗರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದ್ ಕುತ್ಬಾ ಮತ್ತು ಪ್ರಾರ್ಥನೆಯನ್ನು ಖತೀಬ ಅಶ್ರಫ್ ಖಾಮಿಲ್ ಸಖಾಫಿ ನೆರವೇರಿಸಿದರು.
ಜಮಾ ಅತ್ ಅಧ್ಯಕ್ಷ ಮಹಮ್ಮದ್ ಕೆ.ಎಂ.ಎಸ್, ‘ಸೂಡ’ ಅಧ್ಯಕ್ಷ ಕೆ.ಎಂ.ಮುಸ್ತಫಾ, ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಕುತ್ತಮೊಟ್ಟೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಉಮ್ಮರ್ ಕೆ. ಎಸ್., ರಿಯಾಜ್ ಕಟ್ಟೆಕ್ಕಾರ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ, ಅನ್ಸಾರ್, ಅಧ್ಯಕ್ಷ ಅಬ್ದುಲ್ಲಾ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಭಾಗವಹಿಸಿದ್ದರು.
ನಂತರ ಸಾಮೂಹಿಕ ಪಾರ್ಥನೆ ಮತ್ತು ಕಬರ್ ಝಿಯಾರತ್ ನಡೆಯಿತು. ನಂತರ ಮನೆ ಮನೆಗೆ ಭೇಟಿ ನೀಡಿ ಈದ್ ಸಂದೇಶ ನಿಡಲಾಯಿತು. ತಾಲ್ಲೂಕಿನ ವಿವಿಧ ಮಸೀದಿಗಳಲ್ಲೂ ಹಬ್ಬ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.