ಪುತ್ತೂರು: ನೂಜಿಬೈಲು, ಅಂಕೋತ್ತಿಮಾರು ಪರಿಸರದಲ್ಲಿ ಸೋಮವಾರ ರಾತ್ರಿ ದಾಳಿ ಮಾಡಿರುವ ಕಾಡಾನೆ ಬೆಳೆ ಹಾನಿ ಮಾಡಿದೆ.
ಜಯಪ್ರಕಾಶ್ ರೈ ನೂಜಿಬೈಲು, ಅಶೋಕ್‌ಕುಮಾರ್ ರೈ ರೈ ನೂಜಿಬೈಲು ಮತ್ತು ನಾರಾಯಣ ರೈ ಅಂಕೋತ್ತಿಮಾರು ಅವರ ಬಾಳೆ, ಅಡಿಕೆ ಮತ್ತು ತೆಂಗಿನ ಸಸಿಗಳನ್ನು ನಾಶ ಮಾಡಿದೆ. ದೀವಿ ಹಲಸು ಮರಗಳ ಸಿಪ್ಪೆ ತೆಗೆದು ಹಾನಿಗೊಳಿಸಿವೆ.
ವಲಯ ಅರಣ್ಯಾಧಿಕಾರಿ ಮದನ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.