
ಪ್ರಜಾವಾಣಿ ವಾರ್ತೆ
ಹುಸಿ ಬಾಂಬ್ ಕರೆ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರೀಯ ದಳ ತಂಡದ ತಪಾಸಣೆ (ಸಾಂಕೇತಿಕ ಚಿತ್ರ)
ಮಂಗಳೂರು: ನಗರದ ಬಿಜೈನ ಲೂರ್ಡ್ಸ್ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಒಡ್ಡಿ ಇ-ಮೇಲ್ ರವಾನಿಸಲಾಗಿದೆ.
ಗುರುವಾರ ಇ ಮೆಲ್ ಅನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿಯವರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರು.
ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದವರನ್ನು ಕರೆಸಿ ಶಾಲೆಯ ಪ್ರಾಂಗಣದಲ್ಲಿ ಗುರುವಾರ ಪರಿಶೋಧ ನಡೆಸಲಾಗಿದೆ. ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.