ADVERTISEMENT

ಮಂಗಳೂರು | ನಕಲಿ ವಜ್ರ ಮಾರಾಟ: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:08 IST
Last Updated 12 ನವೆಂಬರ್ 2025, 5:08 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಮಂಗಳೂರು: ರಾಸಾಯನಿಕ ಆವಿಯ ಶೇಖರಣೆ (ಸಿವಿಡಿ) ಮೂಲಕ ಪ್ರಯೋಗಾಲಯದಲ್ಲಿ ತಯಾರಿಸಿದ ನಕಲಿ ವಜ್ರದ ಹರಳನ್ನು ಜೆಮೋಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆರಿಕದ (ಜಿಐಎ) ನಕಲಿ ರಶೀದಿಯೊಂದಿಗೆ ಅಸಲಿ ಎಂದು ಮಾರಾಟ ಮಾಡಿ ವಂಚಿಸಿದ ಬಗ್ಗೆ ನಕಲಿ ನಗರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಅ.7ರಂದು ಆರೋಪಿ ಅಶ್ರಫ್‌ ಎಂಬಾತ ನನ್ನ ಚಿನ್ನದ ಅಂಗಡಿಗೆ ಬಂದು ತನ್ನಲ್ಲಿದ್ದ 3 ಕ್ಯಾರೆಟ್‌ನ ವಜ್ರದ ಹರಳನ್ನು ತೋರಿಸಿ ಅವುಗಳನ್ನು ₹ 18 ಲಕ್ಷಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದ. ಅ.14ರಂದು ಅಶ್ರಫ್‌ ತನ್ನ ದೂರದ ಸಂಬಂಧಿ ಮೆಹಬೂಬ್ ಎಂಬಾತನನ್ನು ಪಿರ್ಯಾದಿದಾದರರ ಅಂಗಡಿಗೆ ಕಳುಹಿಸಿ ಕೊಟ್ಟಿದ್ದ. ಮೆಹಬೂಬ್‌ 2 ಕ್ಯಾರೆಟ್‌ನ ವಜ್ರದ ಹರಳನ್ನು ತೋರಿಸಿ₹ 6 ಲಕ್ಷಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದ. ಅವುಗಳ ನೈಜ ಎಂದು ಬಿಂಬಿಸಲು ಜಿಐಎ ರಶೀದಿಗಳನ್ನು ಕೂಡ ಕೊಟ್ಟಿದ್ದ. ಆ ಹರಳುಗಳ ನೈಜತೆ  ಪರಿಶೀಲಿಸಿದಾಗ ಆ ವಜ್ರದ ಹರಳುಗಳು ಪ್ರಯೋಗಾಲಯದಲ್ಲಿ ತಯಾರಿಸಿದ ನಕಲಿ ವಜ್ರ ಎಂದು ಗೊತ್ತಾಗಿತ್ತು. ಆತ ಸಲ್ಲಿಸಿದ್ದ ಜಿಐಎ ರಶೀದಿಯೂ ನಕಲಿ ಎಂದು ತಿಳಿದುಬಂದಿತ್ತು’ ಎಂದು ಅರುಣ್ ಶೆಟ್ ಎಂಬವರು ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.