ADVERTISEMENT

ರೈತರು ಉಪಕಸುಬಲ್ಲಿ ತೊಡಗಿಸಿಕೊಳ್ಳಿ 

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:35 IST
Last Updated 24 ಡಿಸೆಂಬರ್ 2025, 6:35 IST
ಮೂಡುಬಿದಿರೆಯ ತೆಂಕಮಿಜಾರಿನ ಶಾಂತಿಗಿರಿಯಲ್ಲಿ ಮಂಗಳವಾರ ನಡೆದ ಅಣಬೆ ಕೃಷಿ ಮತ್ತು ಸಾಬೂನು ತಯಾರಿಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು 
ಮೂಡುಬಿದಿರೆಯ ತೆಂಕಮಿಜಾರಿನ ಶಾಂತಿಗಿರಿಯಲ್ಲಿ ಮಂಗಳವಾರ ನಡೆದ ಅಣಬೆ ಕೃಷಿ ಮತ್ತು ಸಾಬೂನು ತಯಾರಿಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು    

ಮೂಡುಬಿದಿರೆ: ರೈತ ದಿನಾಚರಣೆ ಅಂಗವಾಗಿ ತೆಂಕ ಮಿಜಾರು ಗ್ರಾಮ ಪಂಚಾಯತಿ, ಸಂಜೀವಿನಿ ಒಕ್ಕೂಟ ಮತ್ತು ಕೃಷಿ ಇಲಾಖೆ ಸಯೋಗದಲ್ಲಿ ಅಣಬೆ ಕೃಷಿ ಹಾಗೂ ಸಾಬೂನು ತಯಾರಿಕೆ ತರಬೇತಿ ಕಾರ್ಯಕ್ರಮವು ಶಾಂತಿಗಿರಿ ಹರಿ ಭಜನಾ ಮಂಡಳಿಯ ಸಭಾಭವನದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ತೆಂಕಮಿಜಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್, ‘ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಆದಾಯ ತರುವ ಅಣಬೆ ಕೃಷಿ ಮಾಡಬೇಕು’ ಎಂದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಇಂದಿರಾ, ತರಬೇತಿ ಕಾರ್ಯಕ್ರಮದ  ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಗೋಪಾಲ ಪೂಜಾರಿ ಅಣಬೆ ಕೃಷಿಯ ಬಗ್ಗೆ ಹಾಗೂ ಇಗ್ನೇಶಿಯಸ್ ಲೋಬೊ ಅವರು ಸಾಬೂನು ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಹಾಯಕ ನಿರ್ದೇಶಕ ಗಣೇಶ್ ಅಡಿಗ ಉಪಸ್ಥಿತರಿದ್ದರು.

ADVERTISEMENT

ತೆಂಕಮಿಜಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೋಹಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.