ADVERTISEMENT

ಮನಗೆದ್ದ ಹಾಲಕ್ಕಿಗರ ತಾರ್ಲೆ ನೃತ್ಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:44 IST
Last Updated 20 ಏಪ್ರಿಲ್ 2021, 16:44 IST
ಅಂಕೋಲಾದಿಂದ ಮಂಗಳೂರಿಗೆ ಬಂದಿದ್ದ ಜಾನಪದ ಹಾಡುಗಾರ್ತಿ ಸುಕ್ರಿ ಗೌಡ ಹಾಗೂ ಹಾಲಕ್ಕಿ ಮಹಿಳೆಯರು
ಅಂಕೋಲಾದಿಂದ ಮಂಗಳೂರಿಗೆ ಬಂದಿದ್ದ ಜಾನಪದ ಹಾಡುಗಾರ್ತಿ ಸುಕ್ರಿ ಗೌಡ ಹಾಗೂ ಹಾಲಕ್ಕಿ ಮಹಿಳೆಯರು   

ಮಂಗಳೂರು: ನಂತೂರು ತಾರೆತೋಟದ ‘ಮೂಲತ್ವ’ ಆಧ್ಯಾತ್ಮಿಕ ತಂಡದ ಪ್ರಕಾಶ್ ಅವರು ಹಾಲಕ್ಕಿ ಬುಡಕಟ್ಟು ಸಮುದಾಯದ ನಾಯಕಿ, ಜಾನಪದ ಹಾಡುಗಾರ್ತಿಸುಕ್ರಿ ಬೊಮ್ಮ ಗೌಡ ಮತ್ತು ಅವರ ತಂಡದ ಪದ್ಮಾವತಿ ಗೌಡ, ಲಲಿತಾ ಗೌಡ, ಕುಚ್ಲಿ ಗೌಡ ಅವರನ್ನು ಗೌರವಿಸಿದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನಿಂದ ಬಂದಿದ್ದ ಸುಕ್ರಿ ಗೌಡ ತಂಡದವರು ಜನಪದ ಹಾಡು, ಹಾಲಕ್ಕಿ ತಾರ್ಲೆ ನೃತ್ಯ ಪ್ರದರ್ಶಿಸಿದರು. ಲೋಕ ಕಲ್ಯಾಣಕ್ಕಾಗಿ ಮತ್ತು ಸದ್ಯದ ಸಾಂಕ್ರಾಮಿಕ, ಪ್ರಾಕೃತಿಕ ದುರಂತಗಳು ಕೊನೆಯಾಗಿ ಶಾಂತಿ, ನೆಮ್ಮದಿ, ಆರೋಗ್ಯ ಲಭಿಸಲೆಂದು ಪ್ರಾರ್ಥಿಸಿ, ಭಜನೆ, ವೇದ, ಪ್ರಾರ್ಥನೆ ನಡೆಸಲಾಯಿತು. ಹಾಲಕ್ಕಿಗರ ತಾರ್ಲೆ ನೃತ್ಯ ಮಂಗಳೂರಿಗರ ಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT