ADVERTISEMENT

ಕಾಮೆಡ್-ಕೆ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ | ಐಐಎಸ್‌ಸಿಯಲ್ಲಿ ಓದುವಾಸೆ: ಶಿಶಿರ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 23:30 IST
Last Updated 7 ಜೂನ್ 2025, 23:30 IST
<div class="paragraphs"><p>ಶಿಶಿರ್ ಶೆಟ್ಟಿ</p></div>

ಶಿಶಿರ್ ಶೆಟ್ಟಿ

   

ಮೂಡುಬಿದಿರೆ (ದಕ್ಷಿಣ ಕನ್ನಡ): ಕಾಮೆಡ್-ಕೆ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿರುವ ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶಿಶಿರ್ ಶೆಟ್ಟಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಉನ್ನತ ಶಿಕ್ಷಣ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. 

‘ತರಗತಿಯಲ್ಲಿ ಉಪನ್ಯಾಸಕರು ಮಾಡುತ್ತಿದ್ದ ಬೋಧನೆಯನ್ನು ಆಸಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುತ್ತಿದ್ದೆ. ಎಕ್ಸಲೆಂಟ್‌ನ ಶೈಕ್ಷಣಿಕ ವಾತಾವರಣ, ಹೆತ್ತವರ ಪ್ರೋತ್ಸಾಹ ನನ್ನ ಸಾಧನೆಗೆ ಪ್ರೇರಣೆಯಾಯಿತು. ಮುಂದೆ ಐಐಎಸ್‌ಸಿ ಮೂಲಕ ಬಿಟೆಕ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತೇನೆ’ ಎಂದು ಶಿಶಿರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶಿಶಿರ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ, ಜೆಇಇ  ಮೇನ್ಸ್‌ನಲ್ಲಿ 99.971 ಪರ್ಸಂಟೈಲ್ ಹಾಗೂ ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ 4ನೇ ರ್‍ಯಾಂಕ್ ಪಡೆದಿದ್ದರು. ಅವರು ಬೆಳ್ತಂಗಡಿಯವರಾಗಿದ್ದು ತಂದೆ ಹರೀಶ್ ಶೆಟ್ಟಿ ಬಂಟ್ವಾಳದ ಎಲ್‌ಐಸಿ ಶಾಖೆಯ ಉದ್ಯೋಗಿಯಾಗಿ. ತಾಯಿ ಸುಮಿತ ಶೆಟ್ಟಿ ಮೂಡುಬಿದಿರೆಯ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.