ADVERTISEMENT

ಕೋವಿಡ್ ನಿಯಮ ಪಾಲಿಸಿ: ಕಮಿಷನರ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:44 IST
Last Updated 18 ಜುಲೈ 2021, 5:44 IST
ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ಜತೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದರು.
ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ಜತೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದರು.   

ಸುರತ್ಕಲ್: ಕೋವಿಡ್‍ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಾಮೂಹಿಕವಾಗಿ ಹಬ್ಬಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ. ಮುಂಬರುವ ಬಕ್ರೀದ್ ಹಬ್ಬವನ್ನು ಎಲ್ಲರೂ ನಿಯಮದಂತೆ ಆಚರಿಸಬೇಕು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.

ಕೃಷ್ಣಾಪುರ 7ನೇ ಬ್ಲಾಕ್‍ನ ಬದ್ರಿಯಾ ಜುಮ್ಮಾ ಮಸೀದಿ, ಕೇಂದ್ರ ಜಮಾತ್‌ನಲ್ಲಿ ಶನಿವಾರ ಆಡಳಿತ ಮಂಡಳಿಯ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಿಯಮಾನುಸಾರ ಹಬ್ಬ ಆಚರಿಸಲು ಎಲ್ಲ ಮಸೀದಿಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದೆ. ಹೆಚ್ಚು ಜನ ಸೇರದೆ, ಅಗತ್ಯ ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಲು ಮಸೀದಿಯ ಆಡಳಿತ ಮಂಡಳಿ ಜನರ ಮನವೊಲಿಸಬೇಕು. 50 ಜನರಿಗಿಂತ ಅಧಿಕ ಜನರು ಸೇರಬಾರದು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂದರು.

ಬದ್ರಿಯಾ ಜುಮ್ಮಾ ಮಸೀದಿ ಕೇಂದ್ರಿಯ ಜಮಾತ್ ಅಧ್ಯಕ್ಷ ಜಲೀಲ್ ಬದ್ರಿಯಾ ಮಾತನಾಡಿ, ‘ಪೊಲೀಸ್ ಇಲಾಖೆ ನೀಡಿದ ಸೂಚನೆಗಳನ್ನು ಪಾಲಿಸಲಾಗುವುದು ಎಂದರು. ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಪಣಂಬೂರು ಎಸಿಪಿ ಮಹೇಶ್ ಕುಮಾರ್, ಸುರತ್ಕಲ್ ಠಾಣಾಧಿಕಾರಿ ಕೆ. ಚಂದ್ರಪ್ಪ, ಖತೀಬ್ ಉಮ್ಮರ್ ಫಾರೂಕು, ಬದ್ರಿಯಾ ಜುಮ್ಮಾ ಮಸೀದಿ ಕೇಂದ್ರಿಯ ಜಮಾತ್ ಪದಾಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.