ADVERTISEMENT

ಬ್ಯಾಡ್ಮಿಂಟನ್: ಉಚಿತ ತರಬೇತಿ ಏಪ್ರಿಲ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 13:23 IST
Last Updated 29 ಮಾರ್ಚ್ 2025, 13:23 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಯೋಜಿಸಿರುವ ಉಚಿತ ಬ್ಯಾಡ್ಮಿಂಟನ್ ತರಬೇತಿ ಏ 1ರಿಂದ 30ರ ವರೆಗೆ ಫಾದರ್ ಮುಲ್ಲರ್ ಒಳಾಂಗಣದ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಉಪಾಧ್ಯಕ್ಷ ಅವಿನಾಶ್ ಸುವರ್ಣ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐದು ವರ್ಷ ಮೇಲಿನ ಬಾಲಕ–ಬಾಲಕಿಯರು ಮತ್ತು ಯುವಕ–ಯುವತಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಮಾಹಿತಿ 8217221202 ಅಥವಾ 7975525395 ಸಂಪರ್ಕಿಸಬಹುದು. dkdbamangalore@gmail.com ಮೂಲಕ ನೋಂದಣಿ ಮಾಡಬಹುದಾಗಿದೆ ಎಂದು ತಿಳಿಸಿದರು.

ವಿಶೇಷ ತಂತ್ರಗಳನ್ನು ಹೇಳಿಕೊಡಲು ಬೆಂಗಳೂರಿನಿಂದ ಕೋಚ್‌ ಕರೆಸಲಾಗುತ್ತಿದೆ. ಸಂಸ್ಥೆಯಲ್ಲಿ ನಿರಂತರವಾಗಿ ಚಟುವಟಿಕೆ ನಡೆಯುತ್ತಿದ್ದು ಈ ತರಬೇತಿ ಶಿಬಿರದ ನಂತರ ಹೆಚ್ಚುವರಿ ತರಬೇತಿ ನೀಡುವ ಚಿಂತನೆಯೂ ಇದೆ ಎಂದು ಅವರು ವಿವರಿಸಿದರು.

ADVERTISEMENT

ಜಂಟಿ ಕಾರ್ಯದರ್ಶಿ ಎ.ಎಸ್ ವೆಂಕಟೇಶ್‌, ಖಜಾಂಚಿ ದಯಾನಂದ್‌ ಪಿ.ಎಸ್‌, ಕಾರ್ಯಕಾರಿ ಸಮಿತಿ ಸದಸ್ಯರಾದ ಗಣೇಶ್ ಪ್ರಸಾದ್ ಮತ್ತು ಸುರೇಶ್‌ ಎಚ್‌.ಪಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.