ವೈದ್ಯಕೀಯ ಸೀಟು
–ಪ್ರಾತಿನಿಧಿಕ ಚಿತ್ರ
ಮಂಗಳೂರು: ಮಂಗಳೂರು ಹಾಗೂ ಸುತ್ತಮುತ್ತಲ ಪ್ರತಿಷ್ಠಿತ ವೈದ್ಯಕೀಯ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ವಿವಿಧ ಕೋರ್ಸುಗಳಿಗೆ ಆರ್ಥಿಕವಾಗಿ ಹಿಂದುಳಿದ ಆಸಕ್ತ ನಾಲ್ಕು ಜಿಲ್ಲೆಗಳ ಮುಸ್ಲಿಂ ವಿದ್ಯಾರ್ಥಿಗಳಿಗೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಎಂಇಐಎಫ್)ದ ಮೂಲಕ ಉಚಿತ ಸೀಟುಗಳ ಕೊಡುಗೆಯನ್ನು ಆಯಾ ಕಾಲೇಜು ಆಡಳಿತ ಮಂಡಳಿಗಳು ನೀಡಿವೆ ಎಂದು ಎಂಇಐಎಫ್ ತಿಳಿಸಿದೆ.
ವೈದ್ಯಕೀಯ ಸೀಟು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆಯುವ ಇಬ್ಬರು ಅರ್ಹ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಲಾಗುವುದು.
ನೀಟ್ ಪುನರಾವರ್ತಿತ ತರಬೇತಿ: ಈ ವರ್ಷದ ಪಿಯುಸಿಯಲ್ಲಿ ಶೇ 94ಕ್ಕೂ ಅಧಿಕ ಅಂಕ ಗಳಿಸಿ, ನೀಟ್‌ನಲ್ಲಿ ಅತ್ಯಲ್ಪ ಅಂತರದಿಂದ ಎಂಬಿಬಿಎಸ್ ಸೀಟು ವಂಚಿತರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ಹಾಗೂ ಸುತ್ತಮುತ್ತಲ ವಿದ್ಯಾ ಸಂಸ್ಥೆಗಳಲ್ಲಿ ಒಂದು ವರ್ಷದ ಉಚಿತ ಪುನರಾವರ್ತಿತ ನೀಟ್ ತರಬೇತಿಗೆ 40 ಸೀಟು ಒದಗಿಸಲಾಗುವುದು.
ಎಂಜಿನಿಯರಿಂಗ್‌ನಲ್ಲಿ 10 ಸೀಟುಗಳು ಲಭ್ಯ...
ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೀಟುಗಳು: ಫಾರ್ಮಸಿ, ನರ್ಸಿಂಗ್, ಫಿಜಿಯೊಥೆರಪಿ, ಅಲೈಡ್ (ಬಿಎಸ್ಸಿ–ಎಂಎಲ್‌ಟಿ/ಎಂಐಟಿ), ಪ್ಯಾರಾಮೆಡಿಕಲ್ (ಡಿಪ್ಲೊಮಾ–ಎಂಎಲ್‌ಟಿ, ಎಂಐಡಿ, ಒಟಿ/ಎಟಿ, ಡೈಯಾಲಿಸಿಸ್, ನೇತ್ರ) ವಿಷಯದಲ್ಲಿ ಒಟ್ಟಾರೆ 100 ಸೀಟುಗಳು ಲಭ್ಯ.
ಸಿಇಟಿ, ನೀಟ್, ಜೆಇಇ, ಕ್ಯಾಟ್‌ಗೆ ಆಯ್ಕೆಗೊಂಡವರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಈ ಕೋರ್ಸುಗಳಿಗೆ ಆಯ್ಕೆಗೊಂಡ ಅರ್ಹ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕ ಭರಿಸಲು ಗರಿಷ್ಠ ತಲಾ ₹25 ಸಾವಿರದವರೆಗೆ ನೀಡಲಾಗುವುದು. ಈ ರೀತಿ 20 ಸೀಟುಗಳು ಲಭ್ಯ ಇವೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆಯಬಹುದು. ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ಜೂನ್ 30ರ ಒಳಗಾಗಿ ಎಂಇಐಎಫ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗೆ ಅಶ್ರಫ್ ಬಾವ (ಮೊ. 8792115666) ಅವರನ್ನು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ, ಹೈದರ್ ಮರ್ದಾಳ (ಮೊ. 88842 02361) ಅವರನ್ನು ಮಧ್ಯಾಹ್ನ 6ರಿಂದ 9ರವರೆಗೆ ಸಂಪರ್ಕಿಸಬಹುದು ಎಂದು ಎಂಇಐಎಫ್ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.